ಗಾಯಾಳುಗಳು ಆಸ್ಪತ್ರೆಗೆ
ಆಲ್ಟೋ ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಗಾಯಗಳಾದ ಘಟನೆ ಪೆರಾಜೆಯ ಕಲ್ಚರ್ಪೆ ಬಳಿ ಸಂಭವಿಸಿದೆ.
ಮಂಗಳೂರು ಮೂಲದ ಪ್ರಜ್ವಲ್ ಎಂಬವರು ತಮ್ಮ ಬೈಕ್ನಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿದ್ದು, ಎದುರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಟಿ.ಎಂ.ಶಹೀದ್ರವರ ಸಹೋದರ ಚಲಾಯಿಸುತ್ತಿದ್ದ ಆಲ್ಟೋ ಕಾರು ಪರಸ್ಪರ ಡಿಕ್ಕಿಯಾಯಿತು.
ಕಾರಿನಲ್ಲಿದ್ದ ಚಾಲಕ ಹಾಗೂ ಶಹೀದ್ರ ತಾಯಿಯವರಿಗೆ ಗಾಯಗಳಾಗಿದ್ದು, ಅವರನ್ನು ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗಂದು ಕರೆತರಲಾಯಿತು. ಬೈಕ್ ಸವಾರನನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಕಾರು ಚಾಲಕ ಜಾವಿದ್ ರವರು ಅವರ ತಾಯಿಯವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಮನೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.