ಅಂದು ಸುಳ್ಯದಲ್ಲಿ , ಇಂದು ಮತ್ತೆ ಕಡಬದಲ್ಲಿ ನಡೆದ ಪ್ರಕರಣ
85 ಲೀಟರ್ ತುಂಬಿಸಿ ವಂಚನೆ
ಡಿಸೆಂಬರ್ 25 ಸುಳ್ಯದ ಪೈಚಾರ್ ಪೆಟ್ರೋಲ್ ಬಂಕ್ ನಿಂದ ಸುಮಾರು 6 ಸಾವಿರ ರೂ ಮೊತ್ತದ ಡೀಸೆಲ್ ತುಂಬಿಸಿ ಪರಾರಿಯಾಗಿದ್ದವ ಮತ್ತೆ ಜ 22 ರಂದು ಮುಂಜಾನೆ ಸುಮಾರು 6 ಗಂಟೆಗೆ ಕಡಬದಲ್ಲಿ ಅದೇ ರೀತಿಯಲ್ಲಿ ಸುಮಾರು 7 ಸಾವಿರ ರೂಗಳ ಡೀಸೆಲ್ ತುಂಬಿಸಿ ಮತ್ತೆ ಪರಾರಿಯಾಗಿರುವ ಬಗ್ಗೆ ತಿಳಿದು ಬಂದಿದೆ.
ಸುಳ್ಯದಲ್ಲಿ ಅಂದು KA 01 MX 9632 ನಂಬರ್ ಪ್ಲೇಟ್ ಇರುವಂತಹ ಮಹೀಂದ್ರ XUV500 ವಾಹನ ಸುಮಾರು 6 ಸಾವಿರದಷ್ಟು ಮೊತ್ತದ ಡೀಸೆಲ್ ಅನ್ನು ಹಾಕಿ, ಸಿಬ್ಬಂದಿ ಜೊತೆ 2 ಲೀಟರ್ ಪೆಟ್ರೋಲ್ ಅನ್ನು ಬಾಟಲಿನಲ್ಲಿ ತರುವಂತೆ ಹೇಳಿ ಪೆಟ್ರೋಲ್ ಪಂಪ್ ನ ಸಿಬ್ಬಂದಿ ಪೆಟ್ರೋಲ್ ತರಲು ಹೋದಾಗ ವ್ಯಕ್ತಿಯು ಹಣವನ್ನು ನೀಡದೆ ಪರಾರಿಯಾಗಿದ್ದ.ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮತ್ತೆ ಇದೇ ರೀತಿಯಾಗಿ ಜ 22 ರಂದು KA 01 MX 9632 ನಂಬರ್ ಪ್ಲೇಟ್ ಹೊಂದಿರುವ ಮಹೀಂದ್ರ ತಾರ್ ವಾಹನವು ಕಡಬದ ಇಂಡಿಯನ್ ಪೆಟ್ರೋಲ್ ಪಂಪ್ ನಲ್ಲಿ ಸುಮಾರು 7 ಸಾವಿರ ಮೊತ್ತದ ಡೀಸೆಲ್ ನ್ನು ಹಾಕಿ ಬಾಟಲಿಗೆ ಪೆಟ್ರೋಲ್ ತುಂಬಿಸಲು ಹೇಳಿದ್ದು ಸಿಬ್ಬಂದಿ ಪೆಟ್ರೋಲ್ ತುಂಬಿಸುವಾಗ ವಾಹನದಲ್ಲಿದ್ದ ವ್ಯಕ್ತಿಯು ಹಣ ನೀಡದೆ ಪರಾರಿಯಾಗಿರುತ್ತಾನೆ.
ಘಟನೆಗೆ ಸಂಭಂದಿಸಿ ಸುಳ್ಯ ಮತ್ತು ಕಡಬದ ಎರಡು ವಾಹನಗಳ ನಂಬರ್ ಪ್ಲೇಟ್ಗಳು ಒಂದೇ ಆಗಿದ್ದು ವಾಹನ ಬೇರೆ ಬೇರೆ ಯಾಗಿರುತ್ತದೆ.ನಂಬರ್ ಪ್ಲೇಟ್ ಪ್ರಕಾರ ತಾರ್ ವಾಹನಕ್ಕೆ ಬಳಸಿರುವ ನಂಬರ್ ಐ ಟ್ವೆಂಟಿ ವಾಹನ ವಾಗಿರುತ್ತದೆ.ಆದರೆ ಎರಡು ಪಂಪ್ ಗೆ ಬಂದಿರುವಂತಹ ವಾಹನಗಳು ಮಹೀಂದ್ರಾ ತಾರ್ ಮತ್ತು ಮಹಿಂದ್ರ XUV 500 ಆಗಿರುತ್ತದೆ ಎನ್ನಲಾಗಿದೆ.
ಈ ಬಗ್ಗೆ ವಂಚನೆಗೊಂಡವರು ಕಡಬ ಠಾಣೆಯಲ್ಲಿ ದೂರು ನೀಡಿದ್ದು KA 01 MX 9632 ಗಾಡಿ ನಂಬರ್ ಕಂಡ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ಹಾಗೂ ಎಲ್ಲಾ ಪೆಟ್ರೋಲ್ ಪಂಪಿನ ಮಾಲಕರು, ಸಿಬ್ಬಂದಿಗಳು ಈ ಬಗ್ಗೆ ಹೆಚ್ಚರ ವಹಿಸಬೇಕೆಂದು ದೂರುದಾರರು ಪ್ರಕಟನೆ ಮೂಲಕ ತಿಳಿಸಿದ್ದಾರೆ.