ಕುಕ್ಕುಜಡ್ಕದಲ್ಲಿ ಗರುಡ ಯುವಕಮಂಡಲ(ರಿ) ಚೊಕ್ಕಾಡಿ ಮತ್ತು ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಮಾಹಿತಿ ಶಿಬಿರ ಜ.19ರಂದು ಜರುಗಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಜಡ್ಕ ದಲ್ಲಿ ಶಿಬಿರವನ್ನು ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ದೀಪ ಬೆಳಗಿಸುವುದರೊಂದಗೆ ಉದ್ಘಾಟಿಸಿದರು. ಗರುಡ ಯುವಕ ಮಂಡಲದ ಅಧ್ಯಕ್ಷರಾದ ಯತಿನ್ ಕೊಳಂಬೆರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಬಾಲಕೃಷ್ಣ ಗೌಡ ಬೊಳ್ಳೂರು, ಅಮರ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ, ಕೆ ವಿಜಿ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕರಾದ ಸನತ್ ದೇರಾಜೆ, ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿನಯ್ ಸಂಕೇಶ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ತೀರ್ಥರಾಮ, ಯುವಜನ ಸಂಯುಕ್ತ ಮಂಡಳಿ (ರಿ)ಸುಳ್ಯ ಅಧ್ಯಕ್ಷರಾದ ವಿಜಯ ಕುಮಾರ್ ಉಬರಡ್ಕ, ಗೌಡ ಯುವ ಸೇವಾ ಸಂಘ ಸುಳ್ಯ ಇದರ ನಿರ್ದೇಶಕ ಮಹೇಶ್ ಮೇರ್ಕಜೆ, ರಾಜ್ಯ ಯುವ ಒಕ್ಕೂಟ ಬೆಂಗಳೂರು ಇದರ ನಿರ್ದೇಶಕಶಿವಪ್ರಕಾಶ್ ಕಡಪಳ ಭಾಗವಹಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಜನ ಸಂಯುಕ್ತ ಮಂಡಳಿಯ ಸಾಂಸ್ಕೃತಿಕ ಕಾರ್ಯದರ್ಶಿ ಮತ್ತು ಸುಳ್ಯ ತಾಲ್ಲೂಕು ಆಸ್ಪತ್ರೆಯ ಆರೋಗ್ಯ ಮಿತ್ರ ಮುರಳಿ ನಳಿಯಾರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 235 ಕ್ಕಿಂತಲೂ ಹೆಚ್ಚಿನ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಶಿಬಿರದಲ್ಲಿ ನೇತ್ರ ತಜ್ಞರು, ಹೃದ್ರೂಗ ತಜ್ಞರು, ಕ್ಯಾನ್ಸರ್ ತಜ್ಞರು, ಸ್ತ್ರೀ ರೋಗ ತಜ್ಞರು, ಯುರೋಲಜಿ ಗೆ ಸಂಬಂಧಪಟ್ಟ ತಜ್ಞ ವೈದ್ಯರು ಭಾಗವಹಿಸಿದ್ದರು. ಸ್ತನದ ಕ್ಯಾನ್ಸರ್ ಬಗ್ಗೆ ಮಹಿಳೆಯರಿಗೆ ಅರಿವು ನೀಡಲಾಯಿತು.
ಮುರಳಿ ನಳಿಯಾರು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಅರುಣ್ ಕುಮಾರ್ ಮುಂಡಾಜೆ ವಂದನಾರ್ಪಣೆ ಗೈದರು. ಧನುಷ್ ಕಾಯರ ಕಾರ್ಯಕ್ರಮ ನಿರೂಪಿಸಿದರು.