ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಂದ ಬಿರುಸಿನ ಮತ ಪ್ರಚಾರ
ಕೊಡಗು ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆಯು ಡಿಸೆಂಬರ್ 29 ರಂದು ನಡೆಯಲಿದ್ದು, ಇದರ ಭಾಗವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಂದ ಬಿರುಸಿನ ಮತ ಪ್ರಚಾರವು ಡಿ. 26ರಂದು ಕೊಯನಾಡು ಮತ್ತು ಸಂಪಾಜೆ ವ್ಯಾಪ್ತಿಯಲ್ಲಿ ನಡೆಯಿತು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಗಣಪತಿ ಬಲ್ಯಮನೆ, ಸುಧೀರ್ ಹೊದ್ದೆಟ್ಟಿ, ಕುಸುಮವತಿ ಕನ್ಯಾನ, ಬಾಬು ಹೆಚ್ ಎನ್, ಗೋಪಾಲ್ ಪೂಜಾರಿ, ತಿರುಮಲ ಸೋನ ಮತಯಾಚನೆ ಮಾಡಿದರು.
ಪ್ರಚಾರ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪಿ ಎಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮೊಯಿದಿನ್ ಕುಂಞಿ, ನಿಕಟ ಪೂರ್ವ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಎಸ್ ಪಿ, ನಾಪೋಕ್ಲು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ, ವಲಯ ಕಾರ್ಯದರ್ಶಿ ರಿತಿನ್, ಮೋಹನ ಬಾಳೆಕಜೆ, ನಮಿತಾ ಹೊದ್ದೆಟ್ಟಿ, ಸುಂದರ ಚೆಡಾವ್, ತುಳಸಿ ಗಾಂಧಿ ಪ್ರಸಾದ್, ವಿಜಯ ಕುಮಾರ್ ಕನ್ಯಾನ, ಮಾಧವ ಕನ್ಯಾನ, NSUI ಜಿಲ್ಲಾ ಕಾರ್ಯದರ್ಶಿ ರುನೈಝ್ ಪ್ರಚಾರದಲ್ಲಿ ಭಾಗಿಯಾಗಿದ್ದರು.