ಮೂಡ್ನೂರು ಮರ್ಕಂಜ ಶಾಲೆಗೆ ಬೆಂಚು ಡೆಸ್ಕ್ ಕೊಡುಗೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಲಯ ಮರ್ಕಂಜ ಕಾರ್ಯಕ್ಷೇತ್ರದ ಹಿರಿಯ ಪ್ರಾಥಮಿಕ ಶಾಲೆ ಮೂಡ್ನೂರು ಮರ್ಕಂಜ ಶಾಲೆಗೆ 42,500/- ರೂಪಾಯಿ ಮೌಲ್ಯದ ಬೆಂಚು – ಡೆಸ್ಕ್ ನ್ನು ವಿತರಣೆ ಮಾಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರಾದ ಸತೀಶ್ ರಾವ್ ರವರು ಯೋಜನೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ವಲಯ ಜನಜಾಗೃತಿ ಸಮಿತಿಯ ಸದಸ್ಯರಾದ ಜಗನ್ನಾಥ್ ಕಾಯರ ಇವರು ಯೋಜನೆಯಲ್ಲಿ ಸಿಗುವ ಸೌಲಭ್ಯಗಳು ಹಾಗೂ ಮಕ್ಕಳಿಗೆ ಮುಂದಿನ ಜೀವನದ ವಿದ್ಯಾಭ್ಯಾಸದ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಪ್ರಾಸ್ತಾವಿಕವಾಗಿ ವಲಯದ ಮೇಲ್ವಿಚಾರಕರು ಯೋಜನೆಯ ಬಗ್ಗೆ ಹಾಗೂ ಜ್ಞಾನ ದೀಪ ಶಿಕ್ಷಕಿ, ಸುಜ್ಞಾನ ನಿಧಿ ಕಾರ್ಯಕ್ರಮ, ಸಮುದಾಯಭಿವೃದ್ಧಿ ಕಾರ್ಯಕ್ರಮ ಹಾಗೆ ಹಲವಾರು ವಿಚಾರದ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಸುಜಾತಕುಮಾರಿ, ಒಕ್ಕೂಟದ ಅಧ್ಯಕ್ಷರಾದ ಗೋಪಾಲಕೃಷ್ಣ ಬಲ್ನಾಡಿ, ರಾಧಾಕೃಷ್ಣ ಅಂಗಡಿಮಜಲು, ಕಾರ್ಯದರ್ಶಿಯಾದ ನವೀನ ಕುಮಾರ, ಕೋಶಾಧಿಕಾರಿಯಾದ ರಾಜೇಂದ್ರ ಜೈನ್ , ಸೇವಾಪ್ರತಿನಿಧಿಯಾದ ರೋಹಿಣಿ ಮರ್ಕಂಜ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿಯಾದ ಅಶ್ವಿನಿರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.