ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಇದರ ವತಿಯಿಂದ ಡಿ.26ರಂದು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಮರ್ಕಂಜದಲ್ಲಿ ನೆರವೇರಿತು.
ಶಾಲಾ ವಿದ್ಯಾರ್ಥಿ ಮೋಕ್ಷಿತ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುರೇಶ್ ಕಟದಮೂಲೆ ಅಧ್ಯಕ್ಷತೆಯನ್ನು ವಹಿಸಿದರು. ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ತಾಲೂಕಿನ ಅಧ್ಯಕ್ಷರಾದ ಲೋಕನಾಥ ಅಮೆಚೂರು ದೀಪ ಬೆಳಗಿಸಿ ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ವಲಯ ಮೇಲ್ವಿಚಾರಕರು ಮಾಹಿತಿಯನ್ನು ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ ಅಮೆಚೂರ್ ರವರು ವಿದ್ಯಾರ್ಥಿಗಳಿಗೆ ನಮ್ಮ ಬದುಕಿನ ದಾರಿ ತಪ್ಪುವ ಬಗ್ಗೆ ದುಶ್ಚಟಕ್ಕೆ ಬಲಿಯಾಗದಂತೆ. ಉತ್ತಮ ಜೀವನಗಳನ್ನು ನಡೆಸುವ ಹಾಗೆ ಉನ್ನತ ಶಿಕ್ಷಣವನ್ನು ಪಡೆದ್ದು. ಉತ್ತಮ ಪ್ರಜ್ಜೆಗಳಾಗಿ ಬಾಳಿರಿ. ಹೀಗೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುವ ಮೂಲಕ ಮಾಹಿತಿ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಜಗನ್ನಾಥ್ ಕಾಯರ, ಸತೀಶ್ ರಾವ್ ದಾಸರಬೈಲು, ಹಾಗೂ ಒಕ್ಕೂಟಗಳ ಅಧ್ಯಕ್ಷರಾದ ಲೀಲಾವತಿ ಸೂಟೆಗೆದ್ದೆ, ಗೋಪಾಲಕೃಷ್ಣ ಬಲ್ಕಡಿ, ರಾಧಾಕೃಷ್ಣ ಅಂಗಡಿ ಮಜಲು, ಶಾಲಾ ಮುಖ್ಯೋಪಾಧ್ಯಾಯರಾದ ವೀಣಾ ಎಂ ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಮುಖ್ಯೋಪಾಧ್ಯಾಯರಾದ ವೀಣಾ ಎಂ.ಟಿ. ಹಾಗೂ ಧನ್ಯವಾದವನ್ನು ಮರ್ಕಂಜ ಗ್ರಾಮದ ಸೇವಾ ಪ್ರತಿನಿಧಿಯಾದ ರೋಹಿಣಿಯವರು ನಿರ್ವಹಣೆ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ನಿತ್ಯಾನಂದ ಭೀಮಗುಳಿಯವರು ನೆರೆವೇರಿಸಿದರು.