ಡೆಹ್ರಾಡೂನ್ ನಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಡಾ.ಪಾವನಾ ಕೆ.ಬಿ

0

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಪಾವನಾ ಕೆ.ಬಿ. ಯವರು ಡಿ. 12ರಿಂದ 15ರವರೆಗೆ ಡೆಹ್ರಾಡೂನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ವರ್ಲ್ಡ್ ಆಯುರ್ವೇದ ಕಾಂಗ್ರೆಸ್ ಮತ್ತು ಆರೋಗ್ಯ ಎಕ್ಸ್ಪೋ- 2024 ರ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ” A Comparative Pharmaceutico-Analytical Study and Estimation Of Vasicine Content Of Vasavaleha Prepared By Four Different Methods Of Swarasa Extraction” ಎಂಬ ಸಂಶೋಧನಾ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ.ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ಕಾಯಚಿಕಿತ್ಸಾ ವಿಭಾಗದಲ್ಲಿ ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥ ಆಗಿರುವ ಡಾ. ಭಾಗ್ಯೆಶ್ ರವರ ಪತ್ನಿಯಾಗಿರುವ ಇವರು ಬೆಳ್ಳಾರೆಯ ನಿವೃತ್ತ ಸುಬೇದಾರ್ ಭಾಸ್ಕರ್ ಗೌಡ ಕುತ್ಯಾಳ ರವರ ಪುತ್ರಿ.