ಶಾಂತಿನಗರ: ಇಲಾಖೆಯವರು ತೋಡಿ ಬಿಟ್ಟು ಹೋದ ಹೊಂಡ ಮುಚ್ಚಿದ ಪರಿಸರ ನಿವಾಸಿಗಳು

0

ಸುಳ್ಯ ನಗರದ ಶಾಂತಿನಗರದ ಮುಖ್ಯ ರಸ್ತೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಇಲಾಖೆಯವರು ಗುಂಡಿಗಳನ್ನು ತೋಡಿ ಪರಿಪೂರ್ಣವಾಗಿ ಮುಚ್ಚದೇ ಹೋಗಿದ್ದು ಇದರಿಂದ ಸ್ಥಳೀಯ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಬಗ್ಗೆ ಸ್ಥಳೀಯರು ಸಂಭಂದಪಟ್ಟ ಇಲಾಖಾ ಅಧಿಕಾರಿಗಳಿಗೆ ತಮ್ಮ ಸಮಸ್ಯೆಗಳ ಬಗ್ಗೆ ಹಲವಾರು ಭಾರಿ ಮನವಿ ಮಾಡಿದ್ದು ಸ್ಪಂದನೆ ಸಿಗದಿದ್ದರಿಂದ ಡಿ. ೨೭ ರಂದು ರಾತ್ರಿ ಪರಿಸರದ ನಿವಾಸಿಗಳೇ ಖರ್ಚು ವೆಚ್ಚ ವಹಿಸಿ ಸುಮಾರು ೭, ೮ ಕಡೆಗಳಲ್ಲಿ ಶ್ರಮಧಾನ ಮೂಲಕ ರಸ್ತೆ ಗುಂಡಿಗೆ ಕಾಂಕ್ರಿಟೀಕರಣ ಪಡಿಸುವ ಮೂಲಕ ದುರಸ್ಥಿಗೊಳಿಸಿದ್ದಾರೆ.