ಜ.4: ಪಂಜದಲ್ಲಿ ಸೂರ್ಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

0

ಸುದ್ದಿ ಚಾನೆಲ್ ನಲ್ಲಿ ನೇರ ಪ್ರಸಾರ

ಪ್ರೇಕ್ಷಕರ ಅನುಕೂಲಕ್ಕಾಗಿ ದೊಡ್ಡ ಎಲ್.ಇ.ಡಿ ಸ್ಕ್ರೀನ್

ರಾಜ್ಯ ಪ್ರಶಸ್ತಿ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.) ಇದರ ಆಶ್ರಯದಲ್ಲಿ ಪಂಚಶ್ರೀ ಜೀವ ರಕ್ಷಕ ಅಂಬ್ಯುಲೆನ್ಸ್ ನ 5ನೇ ವರ್ಷದ ಪಾದಾರ್ಪಣೆಯ ಪ್ರಯುಕ್ತ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದಲ್ಲಿ 65 ಕೆ.ಜಿ ವಿಭಾಗದ ಸೂರ್ಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಪಂಚಶ್ರೀ ಟ್ರೋಫಿ-2025 , ಪದಾಧಿಕಾರಿಗಳ ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮ
ಜ.4 ರಂದು ಸಂಜೆ ಗಂಟೆ 4, ರಿಂದ ಪಂಜದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ.ರಾಮಯ್ಯ ಭಟ್ ,ಸಮಾಜ ಸೇವೆಕ , ಮುಳುಗು ತಜ್ಞ ಈಶ್ವರ್ ಮಲ್ಪೆ, ಭಾರತೀಯ ಭೂ ಸೇನೆಯ ಯೋಧ ಹರ್ಷಿತ್ ಎ.ಕೆ. ರವರಿಗೆ ಸನ್ಮಾನ ನಡೆಯಲಿದೆ.


ಕಬಡ್ಡಿ ಪಂದ್ಯಾಟಕ್ಕೆ ಪ್ರಥಮ ರೂ.25,025 ಮತ್ತು ಪಂಚಶ್ರೀ ಟ್ರೋಫಿ, ದ್ವಿತೀಯ ರೂ. 20,025 ಮತ್ತು ಪಂಚಶ್ರೀ ಟ್ರೋಫಿ ,ತೃತೀಯ ರೂ. 10,025 ಮತ್ತು ಪಂಚಶ್ರೀ ಟ್ರೋಫಿ,
ಚತುರ್ಥ ರೂ. 10,025 ಮತ್ತು ಪಂಚಶ್ರೀ ಟ್ರೋಫಿ,ಪಂಚಮ ರೂ. 3,025 ಮತ್ತು ಪಂಚಶ್ರೀ ಟ್ರೋಫಿ ,ಷಷ್ಠ ರೂ. 3,025, ಮತ್ತು ಪಂಚಶ್ರೀ ಟ್ರೋಫಿ,ಸಪ್ತಮ ರೂ. 3,025 ಮತ್ತು ಪಂಚಶ್ರೀ ಟ್ರೋಫಿ, ಅಷ್ಟಮ ರೂ. 3,025 ಮತ್ತು ಪಂಚಶ್ರೀ ಟ್ರೋಫಿ ಹಾಗೂ ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಬೆಸ್ಟ್ ಆಲ್‌ರೌಂಡರ್ ತಲಾ ರೂ. 1,000 ಮತ್ತು ಶಾಶ್ವತ ಫಲಕ ಬಹುಮಾನ ವಿರುತ್ತದೆ. ಕಬಡ್ಡಿ ಪಂದ್ಯ ಕೂಟದ ಶಿಸ್ತುಬದ್ಧ ತಂಡಕ್ಕೆ ವಿಶೇಷವಾಗಿ ಪಂಚಶ್ರೀ ಟ್ರೋಫಿ ನೀಡಿ ಗೌರವಿಸಲಾಗುವುದು.

ಪ್ರವೇಶ ಶುಲ್ಕ ರೂ.1000.ಮೊದಲು ಹೆಸರು ನೋಂದಾಯಿಸಿದ 30 ತಂಡಗಳಿಗೆ ಮಾತ್ರ ಅವಕಾಶ. 9916849715 ನಂಬರ್ ಗೆ ಗೂಗಲ್ ಪೇ ಮುಖಾಂತರ ಪ್ರವೇಶ ಶುಲ್ಕವನ್ನು ಪಾವತಿಸಿ ತಂಡವನ್ನು ನೋಂದಾಯಿಸಿಕೊಳ್ಳಬಹುದು. ಜ.3 ರಂದು ಪಂದ್ಯಾಟದ ತಲುಕು ಪಟ್ಟಿಯನ್ನು ಹಾಕಲಾಗುವುದು. ಸುದ್ದಿ ಚಾನೆಲ್ ನಲ್ಲಿ ನೇರ ಪ್ರಸಾರ ಇರುತ್ತದೆ. ಪ್ರೇಕ್ಷರ ಅನುಕೂಲಕ್ಕಾಗಿ ಕ್ರೀಡಾಂಗಣ ಬಳಿ ದೊಡ್ಡ ಎಲ್.ಇ.ಡಿ ಸ್ಕ್ರೀನ್ ಅಳವಡಿಸಲಾಗುತ್ತದೆ.
ಎಂದು ಸಂಘಟಕರು ತಿಳಿಸಿದ್ದಾರೆ‌.