ಸುಳ್ಯ ತಾಲೂಕಿನ ಬೆಳ್ಳಾರೆ ವಲಯದ ದೇವರಕಾನ ಕಾರ್ಯಕ್ಷೇತ್ರದ ಕಲ್ಪವೃಕ್ಷ ಸಂಘದ ಸದಸ್ಯರಾದ ಶ್ರೀಮತಿ ಉಷಾ ಕೆ ರವರು ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಂಪೂರ್ಣ ಸುರಕ್ಷಾ ವತಿಯಿಂದ ರೂ 35000/-ದ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ವಿಶಾಲ, ಒಕ್ಕೂಟದ ಕಾರ್ಯದರ್ಶಿ ವೇದಾವತಿ, ಸೇವಾಪ್ರತಿನಿಧಿ ಹರೀಣಾಕ್ಷಿ ಉಪಸ್ಥಿತರಿದ್ದರು.