ಆಲೆಟ್ಟಿ ಗ್ರಾಮ ಗೌಡ ಸಮಿತಿ ಸಭೆ : ನೂತನ ಪದಾಧಿಕಾರಿಗಳ ಆಯ್ಕೆ

0

ಆಲೆಟ್ಟಿ ಗ್ರಾಮ ಗೌಡ ಸಮಿತಿ ಸಭೆಯು ಡಿ.೨೮ರಂದು ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ನಡೆಯಿತು.


ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರ್, ಪ್ರಧಾನ ಕಾರ್ಯದರ್ಶಿ ಯತೀರಾಜ್ ಭೂತಕಲ್ಲು, ತಾಲೂಕು ಸಮಿತಿ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ಮಹಿಳಾ ಘಟಕದ ಕಾರ್ಯದರ್ಶಿ ಸವಿತಾ ಸಂದೇಶ್, ಗ್ರಾಮ ಮಹಿಳಾ ಘಟಕ ಅಧ್ಯಕ್ಷೆ ಜಯಲಕ್ಷ್ಮೀ, ಅರೆಭಾಷೆ ಅಕಾಡೆಮಿ ಸದಸ್ಯೆ ಲತಾ ಕುದ್ಪಾಜೆ, ತಾಲೂಕು ತರುಣ ಘಟಕ ಅಧ್ಯಕ್ಷ ಪ್ರೀತಮ್ ಡಿ.ಕೆ., ಗ್ರಾಮ ತರುಣ ಘಟಕ ಅಧ್ಯಕ್ಷ ವಿಷ್ಣುಪ್ರಕಾಶ್ ಮೊದಲಾದವರಿದ್ದರು.


ಸಭೆಯಲ್ಲಿ ನೂತನ ಗ್ರಾಮ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಸತೀಶ್ ಕೊಯಿಂಗಾಜೆ, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಕೋಲ್ಚಾರು, ಕೋಶಾಧಿಕಾರಿಯಾಗಿ ಪುರುಷೋತ್ತಮ ದೋಣಿಮೂಲೆ, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ ಕೆದಂಬಾಡಿ, ನಿರ್ದೇಶಕರುಗಳಾಗಿ ಕರುಣಾಕರ ಪಾಲಡ್ಕ, ಪದ್ಮಯ್ಯ ಪಡ್ಪು, ನವೀನ್ ಕುಮಾರ್ ಕುಂಚಡ್ಕ, ದಿವಾಕರ ಭೂತಕಲ್ಲು, ಹರೀಶ್ ಕುಂದಲ್ಪಾಡಿ, ಪ್ರಸನ್ನ ಕೆ.ಸಿ. ಬಡ್ಡಡ್ಕ, ಕಮಲಾಕ್ಷ ಕೊಯಿಂಗಾಜೆ, ಧರ್ಮಪಾಲ ಕೊಯಿಂಗಾಜೆ, ಪ್ರಶಾಂತ್ ಕೋಲ್ಚಾರ್, ಧನಂಜಯ ಕೋಲ್ಚಾರು, ಗೌರವಸಲಹೆಗಾರರಾಗಿ ತೇಜಕುಮಾರ್ ಬಡ್ಡಡ್ಕ ಆಯ್ಕೆಯಾದರು. ಮಹಿಳಾ ಘಟಕ ಅಧ್ಯಕ್ಷರಾಗಿ ಗೀತಾ ಕೋಲ್ಚಾರು, ಕಾರ್ಯದರ್ಶಿಯಾಗಿ ಭವಾನಿ ಕಟ್ಟಕೋಡಿ ನಾರ್ಕೋಡು, ಉಪಾಧ್ಯಕ್ಷರಾಗಿ ಯಶೋದ ಎಂ.ಬಿ., ಜತೆ ಕಾರ್ಯದರ್ಶಿಯಾಗಿ ಚೇತನ ಅರಂಬೂರು, ಕೋಶಾಧಿಕಾರಿಯಾಗಿ ಜೋತ್ಸ್ನಾ ಕೋಲ್ಚಾರು, ಪೂರ್ವಾಧ್ಯಕ್ಷರು ಜಯಲಕ್ಷ್ಮಿ ನಾರ್ಕೋಡು, ನಿರ್ದೇಶಕರುಗಳಾಗಿ ಶಯನ ಅರಂಬೂರು, ಮಮತಾ ನಾರ್ಕೋಡು, ರತ್ನಾವತಿ ವಾಲ್ತಾಜೆ, ಗೋವರ್ಧಿನಿ ಕೋಲ್ಚಾರು, ಯಶೋದ ಕುಡೆಕಲ್ಲು, ವಾರಿಜ ವೇಣುಗೋಪಾಲ ಕುಡೆಕಲ್ಲು, ಹಾರಾವತಿ ಕುಡೆಕಲ್ಲು, ಸೌಮ್ಯ ಕೊಯಿಂಗಾಜೆ, ರಾಜೀವಿ ಜನಾರ್ದನ ಅರಂಬೂರು, ಅನೀತ ಚಲ್ಲಂಗಾರ್ ಆಯ್ಕೆಯಾದರು,
ತರುಣ ಘಟಕದ ದ ಪದಾಧಿಕಾರಿಗಳಾಗಿ ವಿಷ್ಣು ಪ್ರಕಾಶ್ ನಾರ್ಕೋಡು ಹಾಗೂ ದೀಕ್ಷಿತ್ ಪಾಲಡ್ಕ ಅರಂಬೂರುರನ್ನು ಆಯ್ಕೆ ಮಾಡಲಾಯಿತು.