ಡಿ.30 (ನಾಳೆ)31ನೇ ಖುತಿಬಿಯ್ಯತ್
ದುಗ್ಗಲಡ್ಕ ಸೈಯಿದ್ ಫಕ್ರುದ್ದೀನ್ ತಂಙಳ್ 21ನೇ ಮಖಾಂ ಉರೂಸ್ ಹಾಗೂ ಜಂಇಯ್ಯತು ತರ್ಬಿಯತಿಲ್ ಬುಖಾರಿಯ್ಯ ಇದರ
31ನೇ ಖುತಿಬಿಯ್ಯತ್ ಗೆ ಡಿ.28ರಂದು ಚಾಲನೆ ನೀಡಲಾಯಿತು.
ಧ್ವಜಾರೋಹಣವನ್ನು ಪಾಣಕ್ಕಾಡ್ ಸೈಯಿದ್ ಅಬ್ಬಾಸಲಿ ಶಿಹಾಬ್ ತಂಙಳ್ ನೆರವೇರಿಸಿದರು.
ಉರೂಸ್ ಉದ್ಘಾಟನೆಯನ್ನು ಸೈಯಿದ್ ಜೆಫ್ರಿ ಮುತ್ತುಕೋಯ ತಂಙಳ್ ಮಾಡಿದರು. ಅಧ್ಯಕ್ಷತೆಯನ್ನು ಸೈಯಿದ್ ಝೈನುಲ್ ಆಬಿದೀನ್ ತಂಙಳ್ ವಹಿಸಿದ್ದರು.
ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣೆ ಮಾಡಿದರು. ಸ್ವಾಗತವನ್ನು ಎನ್.ಪಿ.ಅಬ್ದುಲ್ ರಹ್ಮಾನ್ ಮಾಸ್ಟರ್ ಕುನ್ನುಂಗೈ ಮಾಡಿದರು.
ರಾತ್ರಿ ಪ್ರಾರ್ಥನೆಯನ್ನು ಸೈಯಿದ್ ಖಮರುದ್ದೀನ್ ತಂಙಳ್ ನೆರವೇರಿಸಿದರು.ಅಧ್ಯಕ್ಷತೆಯನ್ನು ಅಬ್ದುಲ್ ರಹ್ಮಾನ್ ಹಾಜಿ ವಹಿಸಿದ್ದರು. ಉದ್ಘಾಟನೆಯನ್ನು ಸೈಯಿದ್ ಶರಫುದ್ದೀನ್ ತಂಙಳ್ ನೆರವೇರಿಸಿದರು.ಮುಹಮ್ಮದ್ ಹನೀಫ್ ನಿಝಾಮಿ ಮುಖ್ಯ ಪ್ರಭಾಷಣೆ ಮಾಡಿದರು.ಮಹಮ್ಮದ್ ಆರಿಫ್ ಸ್ವಾಗತಿಸಿದರು.ಮಸೀದಿ ಪ್ರಧಾನ ಕಾರ್ಯದರ್ಶಿ ಹಂಝ ಅಜ್ಮೀರ್ ದೊಡ್ಡತೋಟ,ಹಾಮೀದ್ ಕೊಯಮ್ಮ ತಂಙಳ್, ಪಝಲ್ ಹಾಮಿದ್ ಕೊಯಮ್ಮ ತಂಙಳ್, ಜಲಾಲುದ್ದೀನ್ ತಂಙಳ್,ಸೈಪುದ್ದೀನ್ ತಂಙಳ್, ಮಹಮ್ಮದ್ ಕೊಯಮ್ಮ ತಂಙಳ್ ಕೊನರ,ಹಂಝತ್ ಸಹದಿ,ಹಾಶಿಂ ದಾರಿಮಿ,ಮಾಹಿನ್ ಕೆಳೋತ್,ಅಬ್ದುಲ್ ರಹಿಮಾನ್ ಸಂಕೇಶ್, ಇಬ್ರಾಹಿಂ ಹಾಜಿ ಮಂಡೆಕೋಲು,ಅಬ್ದುಲ್ಲಾ ಹಾಜಿ ಪಳ್ಳತ್ತೂರು,ಅಹಮದ್ ಕಬೀರ್,ಉಮ್ಮರ್ ದಾರಿಮಿ ಸಾಲ್ಮರ,ಅಬೂಭಕ್ಕರ್ ಹಾಜಿ ಮಂಗಳ,ಅಬ್ದುಲ್ ಖಾದರ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ಡಿ.30 ರಂದು ರಾತ್ರಿ ಜಂಯ್ಯತ್ತುಲ್ ತರ್ಬಿಯತಿಲ್ ಬುಖಾರಿಯ್ಯ ಇದರ 31 ನೇ ಖುತಿಬಿಯ್ಯತ್ ನಡೆಯಲಿದೆ.
ಕಾರ್ಯಕ್ರಮದ ಕೊನೆಯಲ್ಲಿ ತಬರುಕ್ ವಿತರಣೆ ನಡೆಯಲಿದೆ