ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ನೇತೃತ್ವದ ನಿಯೋಗದಿಂದ ಮನವಿ ಸಲ್ಲಿಕೆ
ಅರಂತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಡಿಕಾನದ ಮೂಲಕ ಪಟ್ಟಿ – ಭಾಗಮಂಡಲವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸುವಂತೆ ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು.
ಶಾಸಕರನ್ನು ಭೇಟಿ ಮಾಡಿದ ನಿಯೋಗವು ರಸ್ತೆ ಅಭಿವೃದ್ಧಿಯ ಅಗತ್ಯತೆ ಹಾಗೂ ತೊಡಕಾಗಿರುವ ಅರಣ್ಯ ಇಲಾಖೆಯ ತಾಂತ್ರಿಕ ಸಮಸ್ಯೆ ಕುರಿತು ಮನವರಿಕೆ ಮಾಡಿದರು.
ತೊಡಿಕಾನ – ಪಟ್ಟಿ – ಭಾಗಮಂಡಲವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗಾಗಿ ಈ ಹಿಂದೆ ದಿ. ವಸಂತ ಭಟ್ ತೊಡಿಕಾನ ಅವರ ನೇತೃತ್ವದಲ್ಲಿ ಶೇ.75ರಷ್ಟು ಕೆಲಸವನ್ನು ಮಾಡಲಾಗಿತ್ತು. ಈ ರಸ್ತೆ ಅಭಿವೃದ್ಧಿಗೊಂಡರೆ ತೊಡಿಕಾನದಿಂದ ಭಾಗಮಂಡಲಕ್ಕೆ ಕೇವಲ 18 ಕಿ. ಮೀ. ದೂರದಲ್ಲಿ ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ಎ.ಸಿ. ಉತ್ತಪ್ಪ, ಕೇಶವ ಕೊಳಲುಮೂಲೆ, ಪ್ರಧಾನ ಕಾರ್ಯದರ್ಶಿ ಆನಂದ ಕಲ್ಲಗದ್ದೆ, ಕೋಶಾಧಿಕಾರಿ ವಿಜೇತ್ ಮರುವಳ ಸೇರಿದಂತೆ ರಸ್ತೆ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.