ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ರಿ. ಸುಳ್ಯ ತಾಲೂಕು ಇದರ ವತಿಯಿಂದ ಪರಿವಾರಕಾನ ಒಕ್ಕೂಟದ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷರಾದ ಬಾಲಚಂದ್ರ ಸರಳಿ ಕುಂಜ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ರವರು ದೀಪ ಬೆಳಗಿಸುವುದರ ಮೂಲಕ ಚಾಲನೆಯನ್ನು ನೀಡಿ ಮಾತನಾಡುತ್ತಾ ಯೋಜನೆಯು ನಡೆದು ಬಂದ ದಾರಿ ಮತ್ತು ಅದರಿಂದ ನಾವು ಪ್ರಯೋಜನಗಳನ್ನು ಪಡೆದು ಅಭಿವೃದ್ಧಿ ಗೊಂಡಿದ್ದೇವೆ ಇದನ್ನು ನಾವು ಯಾವತ್ತೂ ಮರೆಯಬಾರದು ಇದರಿಂದ ತುಂಬಾ ಕುಟುಂಬಗಳು ಅಭಿವೃದ್ಧಿ ಗೊಂಡಿದೆ ಇದಕ್ಕೆ ಎಲ್ಲಾ ಪ್ರೇರಣೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನೀಡಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ರಿ ಸುಳ್ಯ ತಾಲೂಕು ಇದರ ಕೃಷಿ ಮೇಲ್ವಿಚಾರಕರಾದ ರಮೇಶ್ ರವರು ಮಾತನಾಡುತ್ತಾ ಸುಳ್ಯ ತಾಲೂಕಿನಲ್ಲಿ 2005 ರಲ್ಲಿ ಯೋಜನೆ ಪ್ರಾರಂಭಗೊಂಡಿದ್ದು ಪ್ರಾರಂಭದಲ್ಲಿ ನಾವೆಲ್ಲ ನಮ್ಮ ಕುಟುಂಬಗಳು ಯಾವ ಪರಿಸ್ಥಿತಿಯಲ್ಲಿ ಇತ್ತು ಇದೀಗ ಯೋಜನೆಯಿಂದ ನಮ್ಮ ಕುಟುಂಬಗಳು ನಮ್ಮ ಗ್ರಾಮಗಳು ಯಾವ ರೀತಿ ಅಭಿವೃದ್ಧಿ ಗೊಂಡಿದೆ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಯೋಜನೆಯ ಕಾರ್ಯಕ್ರಮಗಳನ್ನು ನೋಡಲು ಆಗದೆ ಅಸೂಯ ಪಡುತ್ತಿದ್ದಾರೆ ಇದಕ್ಕೆಲ್ಲ ನಾವು ಒಟ್ಟಾಗಿ ನಿಲ್ಲಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಳ್ಯ ವಲಯದ ಮೇಲ್ವಿಚಾರಕರಾದ ಜಯಶ್ರೀ ರವರು ಮಾತನಾಡುತ್ತಾ ಯೋಜನೆಯಿಂದ ಅನೇಕ ಕುಟುಂಬಗಳು ಅಭಿವೃದ್ಧಿ ಹೊಂದಿದೆ ಮಹಿಳೆಯರು ಸಬಲೀಕರಣ ಗೊಂಡಿದ್ದಾರೆ ಯೋಜನೆಯಿಂದ ಕೃಷಿಗೆ ಪೂರಕವಾಗಿ ಸ್ವಉದ್ಯೋಗಕ್ಕೆ ಪೂರಕವಾಗಿ ಗ್ರಾಮದ ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ಅನೇಕ ಲಕ್ಷಾಂತರ ಅನುದಾನಗಳು ಬಂದಿದೆ ಮುಂದೆಯೂ ಕೂಡ ಈ ಯೋಜನೆಯನ್ನು ಬಲಪಡಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಆಗಿದೆ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಪರಿವಾರಕಾನ ಒಕ್ಕೂಟದ ನಾಲ್ಕು ಸಂಘಗಳಿಗೆ 2, ಲಕ್ಷದ 63,000 ರೂಪಾಯಿ ಲಾಭಾಂಶವನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪರಿವಾರಕಾನ ಒಕ್ಕೂಟದ ಪದಾಧಿಕಾರಿಗಳು ಒಕ್ಕೂಟದ ಎಲ್ಲಾ ಸಂಘಗಳ ಸದಸ್ಯರುಗಳು ಭಾಗವಹಿಸಿದ್ದರು ಪರಿವಾರಕಾನ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸುರೇಶ್ ಪರಿವಾರಕಾನ ಸ್ವಾಗತಿಸಿ, ಭಾಗ್ಯಜ್ಯೋತಿ ಸಂಘದ ಸದಸ್ಯಯಾದ ಸುಧಾಮಣಿ ಧನ್ಯವಾದಗೈದರು ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು