ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಸಂತ ಸಂಭ್ರಮ ಕಾರ್ಯಕ್ರಮ – ಸನ್ಮಾನ ಸಮಾರಂಭ

0

ಕೆಪಿಎಸ್ ನಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ, ನಿವೃತ್ತರಾದ ಪ್ರಾಂಶುಪಾಲರು,ಉಪಪ್ರಾಂಶುಪಾಲರು, ಮುಖ್ಯೋಪಾಧ್ಯಾಯರಿಗೆ ಸನ್ಮಾನ

ರಾಜ್ಯ,ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

ಎಲ್ಲಾ ಸಾಧಕರಿಗೆ ವಿದ್ಯಾರ್ಥಿಗಳು ಆರತಿ ಬೆಳಗಿ, ತಿಲಕವಿಟ್ಟು ವಿಶೇಷ ಸನ್ಮಾನ

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ವಸಂತ ಸಂಭ್ರಮ ಕಾರ್ಯಕ್ರಮದಲ್ಲಿ ವಿಶೇಷ ಸಾಧಕರಿಗೆ,ಕೆಪಿಎಸ್ ನಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡವರಿಗೆ,ಸೇವಾ ನಿವೃತ್ತಿಯನ್ನು ಹೊಂದಿದ ಪ್ರಾಂಶುಪಾಲರಿಗೆ,ಉಪಪ್ರಾಂಶುಪಾಲರಿಗೆ,ಮುಖ್ಯೋಪಾಧ್ಯಾಯರಿಗೆ ಸನ್ನಾನ ಸಮಾರಂಭವು ಜ.4 ರಂದು ನಡೆಯಿತು.


ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈಯವರು ಸಾಧಕರನ್ನು ಸನ್ಮಾನಿಸಿದರು.

ಇಂಡಿಯನ್ ನೇವಿಯಲ್ಲಿ ನಿವೃತ್ತರಾದ ಕ್ಯಾ.ವಿಠಲದಾಸ್ ಶೆಣೈ ಬಿ,ಕನ್ನಡ ತಂತ್ರಾಂಶ ಸಂಶೋಧಕ ಕೆ.ಪಿ.ರಾವ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಸಿ.ಪಾಟಾಳಿ ಪಡುಮಲೆ, ಶ್ರೀ ರಂಗಪಟ್ಟಣ ಸತ್ರನ್ಯಾಯಾಧೀಶರಾದ ಟಿ.ಗೋಪಾಲಕೃಷ್ಣ ರೈ, ಕೊಡಗು ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ಪ್ರಶಾಂತಿ ಜಿ,ಗೃಹರಕ್ಷಕ ದಳ ಜಿಲ್ಲಾ ಸಮಾದೇಷ್ಟರಾದ ಮುರಳಿ ಮೋಹನ್ ಚೂಂತಾರು, ವಸಂತ ಶೆಟ್ಟಿ ಬೆಳ್ಳಾರೆ,ರಾಷ್ಟ್ರಪ್ರಶಸ್ತಿ ಪುರಸ್ಕೃತ ಪಿ.ಎನ್.ಭಟ್ ಕಾಯಾರ,ರಾಜ್ಯ ಕೃಷಿ ಪಂಡಿತ ವಿಜೇತ ಕುರಿಯಾಜೆ ತಿರುಮಲೇಶ್ವರ ಭಟ್ ರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ನರಣಿಕೆ ನೀಡಿ ಸನ್ಮಾನಿಸಲಾಯಿತು.
ಕೆಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಶಿಕ್ಷಕರಿಗೆ,ನಿವೃತ್ತ ಪ್ರಾಂಶುಪಾಲರಿಗೆ,ಉಪಪ್ರಾಂಶುಪಾಲರು,ರಾಜ್ಯ,ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ವೇದಿಕೆಯಲ್ಲಿ ಬೆಂಗಳೂರಿನ ಉದ್ಯಮಿ ಜಗನ್ನಾಥ ಶೆಟ್ಟಿ ಪನ್ನೆಗುತ್ತು,ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಸಂಚಾಲಕ ಉಮೇಶ್ ಎಂ.ಪಿ, ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವೀಣಾ,ಸದಸ್ಯರಾದ ಎಸ್.ಮಣಿಕಂಠ,ಶ್ರೀಮತಿ ಜಯಶ್ರೀ,,ಶ್ರೀಮತಿ ಭವ್ಯ ಆರ್, ವಸಂತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ, ಶಾಲಾ ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಶ್ರೀನಾಥ ರೈ ಬಾಳಿಲ,ಕಾಲೇಜಿನ ಪ್ರಾಂಶುಪಾಲ ಜನಾರ್ದನ ಕೆ.ಎನ್,ಉಪಪ್ರಾಂಶುಪಾಲೆ ಉಮಾಕುಮಾರಿ,ಪ್ರಾಥಮಿಕ ಶಾಲಾ ಮುಖ್ಯ ಗುರು ಮಾಯಿಲಪ್ಪ ಉಪಸ್ಥಿತರಿದ್ದರು.


ವಸಂತ ಸಂಭ್ರಮ ಸಮಿತಿ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್.ರೈ ಸ್ವಾಗತಿಸಿ,ವಿದ್ಯಾರ್ಥಿಗಳು ಪ್ರಾರ್ಥಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಮತ್ತು ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕ ವರ್ಗದವರು ಸಹಕರಿಸಿದರು.