ಪಿರಿಯಾಪಟ್ಟಣದಲ್ಲಿ ಡಿ. 22 ರಂದು ಕರ್ನಾಟಕ ರಾಜ್ಯ ಡ್ಯಾನ್ಸ್ ಸ್ಪೋರ್ಟ್ ಚಾಂಪಿಯನ್ ಶಿಪ್ ನಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿ ಹವಿಶ್ ಟಿ. ವಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು,ಬೆಳ್ಳಿ ಪದಕವನ್ನು ಪಡೆದುಕೊಂಡು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರು ಮಡಿಕೇರಿಯ ಶ್ರೀ ವಿಜಯ ಟಿ ಆರ್ ಮತ್ತು ಶ್ರೀಮತಿ ಸೌಮ್ಯ ಕೆ. ಡಿ ಇವರ ಪುತ್ರ.
ಇವರಿಗೆ ಅಭಿ ಕುಲಾಲ್ ಮತ್ತು ಕು. ವೈಷ್ಣವಿ ಪ್ರಕಾಶ್ ರವರು ಮಾರ್ಗದರ್ಶನ ನೀಡಿರುತ್ತಾರೆ.
ಇವರಿಗೆ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ ಮತ್ತು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಎಸ್. ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನಿತ್ತು ಗೌರವಿಸಿದರು.
ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರವೃಂದದವರು ಅಭಿನಂದಿಸಿದರು.