ಜನವರಿ 7 ರಂದು ವರ್ಷಾವಧಿ ಜಾತ್ರೋತ್ಸವ ನಡೆಯಲಿದ್ದು, ಆ ಪ್ರಯುಕ್ತ ಡಿ. 1 ರಂದು ದೇವಳದ ಪ್ರಧಾನ ಅರ್ಚಕ ಶ್ರೀ ಹರಿ ಕುಂಜೂರಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ಗೊನೆಮುಹೂರ್ತ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಸದಸ್ಯ ವೆಂಕಪ್ಪ ಗೌಡ ಆಲಾಜೆ, ಸೇವಾ ಸಮಿತಿ ಸದಸ್ಯೆ ಶ್ರೀಮತಿ ಗುಣವತಿ ನಾವೂರು, ಶ್ರೀಮತಿ ಭಾಗ್ಯ ಪ್ರಸನ್ನ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಶಿವಾನಂದ ಬೊಳ್ಕಜೆ, ಪ್ರಧಾನ ಕಾರ್ಯದರ್ಶಿ ಅನುಪ್ ಕುಮಾರ್ ಆಳ್ವ, ಯತೀಂದ್ರನಾಥ ರೈ ಪಿ.ಡಿ. ಇನ್ನಿತರ ಭಕಾದಿಗಳು ಉಪಸ್ಥಿತರಿದ್ದರು.