ಕುಕ್ಕನ್ನೂರು ಕಿನುಮಾಣಿ ಪೂಮಾಣಿ ದೈವಗಳ ಭಂಡಾರದ ಆಗಮನ

0

ರಾಮ ಮಂದಿರದ ಕಟ್ಟೆಯಲ್ಲಿ ಪೂಜೆ- ಭಜನಾ ಸಂಕೀರ್ತನೆ

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಧ್ವಜಾರೋಹಣದ ದಿನವಾದ ಇಂದು ಕುಕ್ಕನ್ನೂರು ಕಿನುಮಾಣಿ ಪೂಮಾಣಿ ದೈವಗಳ ಭಂಡಾರ ಆಗಮಿಸಿತು.


ಶ್ರೀ ರಾಮ ಪೇಟೆಯ
ಶ್ರೀ ರಾಮ ಮಂದಿರದ ಮುಂಭಾಗದ ಅಶ್ವಥ ಕಟ್ಟೆಯಲ್ಲಿ ಪೂಜೆಯು ನೆರವೇರಿತು.
ಈ ಸಂದರ್ಭದಲ್ಲಿ ಭಜನಾ ಮಂದಿರದಲ್ಲಿ ಭಜಕರಿಂದ ಭಜನಾ ಸಂಕೀರ್ತನೆಯು ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಭಂಡಾರದ ಜತೆ ಕಾಲ್ನಡಿಗೆಯಲ್ಲಿ ಸಾಗಿ ಬಂದರು. ಕಟ್ಟೆ ಪೂಜೆಯ ಬಳಿಕ ಪ್ರಸಾದ ವಿತರಣೆಯಾಯಿತು.