ಉಬರಡ್ಕ ಡಾ.ರಘುರಾಮ ಭಟ್ಟ ರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ

0

ಉಬರಡ್ಕ ಮಿತ್ತೂರು ಮೂಲದ ಡಾ.ರಘುರಾಮ ಭಟ್ ಇವರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ ಲಭಿಸಿದೆ.
ಇವರು ಭಾರತ ಸರ್ಕಾರದ ಅಯುಷ್ ವಿಭಾಗದ ಮೆಡಿಕಲ್ ಅಸಿಸ್ಟೆಂಟ್ & ರೇಟಿಂಗ್ ಬೋರ್ಡ್ ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಇದರ ಅಧ್ಯಕ್ಷರಾಗಿದ್ದಾರೆ.
ಇವರು ಎರಡು ಆಯುರ್ವೇದ ಕಾಲೇಜುಗಳ ಪ್ರಾಂಶುಪಾಲರಾಗಿ, ಸಂಸ್ಕೃತ ಭೋದಕಾರಾಗಿ ಭಾರತೀಯ ವಿಜ್ಞಾನದ ಪ್ರಸರಣದ ಕಾರ್ಯವನ್ನು ಸಾಧಿಸಿದ್ದಾರೆ.
ಇವರು ಉಬರಡ್ಕ ಅನಂತೇಶ್ವರ ಭಟ್ ಮತ್ತು ಶ್ರೀಮತಿ ಸಾವಿತ್ರಿ ದಂಪತಿಗಳ ಪುತ್ರ.