ಮರ್ಕಂಜ : ವಿಜಯ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಮುಡ್ನೂರು ಮರ್ಕಂಜ ಶಾಲೆಯಲ್ಲಿ ಹಲ್ಲಿನ ಸುರಕ್ಷತೆ ಬಗ್ಗೆ ಮಾಹಿತಿ ಕಾರ್ಯಾಗಾರಮಕ್ಕಳಿಗೆ ಟೂತ್ ಪೇಸ್ಟ್ ಮತ್ತು ಟೂತ್ ಬ್ರಶ್ ವಿತರಣೆ

0

ಹಲ್ಲು ಮತ್ತು ಬಾಯಿಯ ಸುರಕ್ಷತೆಯಿಂದ ಅನೇಕ ರೋಗಗಳನ್ನು ತಡೆಗಟ್ಟಲು ಸಾಧ್ಯ : ಡಾ.ರೇವಂತ್

ಬ್ಯಾಾಂಕ್ ಆಫ್ ಬರೋಡ ಸಂಯೋಜನೆಯ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ ಇದರ ಆಶ್ರಯದಲ್ಲಿ ಸೂಂತೋಡು ದಂತ ಚಿಕಿತ್ಸಾಲಯ ಸುಳ್ಯ ಇದರ ಸಹಕಾರದೊಂದಿಗೆ ಹಲ್ಲಿನ ಸುರಕ್ಷತೆ ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ ಮಕ್ಕಳಿಗೆ ಟೂತ್ ಬ್ರಶ್ ವಿತರಣಾ ಕಾರ್ಯಕ್ರಮವು ಇಂದು(ಜ.2) ಸ.ಹಿ,.ಪ್ರಾ.ಶಾಲೆ ಮುಡ್ನೂರು ಮರ್ಕಂಜದಲ್ಲಿ ನಡೆಯಿತು.

ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ವಿಜಯ ಗ್ರಾಮೀಣಾಭೀವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್ ರೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೋಳಿಕೆ ಟೂತ್ ಪೇಸ್ಟ್ ಮತ್ತು ಬ್ರಶ್ ವಿತರಿಸಿದರು.

ಹಲ್ಲಿನ ಸುರಕ್ಷತೆ ಬಗ್ಗೆ ದಂತ ಚಿಕಿತ್ಸಾಲಯ ಸುಳ್ಯ ಇಲ್ಲಿಯ ಡಾ.ರೇವಂತ್ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಶಿಕ್ಷಕರಾದ ದೇವರಾಜ್ ಎಸ್.ಕೆ., ಮರ್ಕಂಜ ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯರಾದ ಗೋವಿಂದ ಅಳವುಪಾರೆ, ರೆಂಜಾಳ ಶಾಸ್ತಾವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ, ವಿಜಯ ಬ್ಯಾಾಂಕ್ ದೊಡ್ಡತೋಟ ಇಲ್ಲಿಯ ಶಾಖಾ ವ್ಯವಸ್ಥಾಪಕರಾದ ಗಜಾನನ, ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಬ್ಯಾಾಂಕ್ ಆಫ್ ಬರೋಡದ ಅಧಿಕಾರಿ ಸುಗುಣಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಲ್ಲಿನ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದ ದಂತ ಚಿಕಿತ್ಸಾಲಯ ಸುಳ್ಯ ಇಲ್ಲಿಯ ಡಾ.ರೇವಂತ್ ರವರು ಹಲ್ಲು ಮತ್ತು ಬಾಯಿಯ ಸುರಕ್ಷತೆಯಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು. ಮಕ್ಕಳು ದಿನದಲ್ಲಿ ಕನಿಷ್ಠ 2 ಬಾರಿ ಹಲ್ಲು ಉಜ್ಜುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರಲ್ಲದೆ ಪೋಷಕರು ಮತ್ತು ವಿದ್ಯಾರ್ಥಿಗಳು ಹಲ್ಲಿನ ಸುರಕ್ಷತೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಬರೆಯುವ ಪುಸ್ತಕ ನೀಡುವ ಬಗ್ಗೆ ಭರವಸೆ: ಮುಖ್ಯ ಶಿಕ್ಷಕ ದೇವರಾಜ್ ಕೆ.ಎಸ್. ರವರು ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕವನ್ನು ಪ್ರತೀ ವರ್ಷ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮತ್ತು ಬ್ಯಾಾಂಕ್ ಆಫ್ ಬರೋಡದ ವತಿಯಿಂದ ನೀಡುವಂತೆ ಮನವಿ ಮಾಡಿಕೊಂಡರು. ತಕ್ಷಣ ಸ್ಪಂಧಿಸಿದ ಸಿಇಒ ವಿಶ್ವನಾಥ್ ರೈಯುವರು ಪುಸ್ತಕವನ್ನು ನೀಡುವ ಬಗ್ಗೆ ಒಪ್ಪಿಗೆ ಸೂಚಿಸಿ ಈ ಬಗ್ಗೆ ಲಿಖಿತ ಮನವಿಯನ್ನು ಪ್ರತಿಷ್ಠಾನಕ್ಕೆ ನೀಡುವಂತೆ ಹೇಳಿದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಜಯ ಗ್ರಾಮಾಭಿವೃದ್ಧಿ ಸಮಿತಿ ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಇದರ ಅಧ್ಯಕ್ಷ ದಯಾನಂದ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಶಾಲಾ ಶಿಕ್ಷಕ ಬೆಳ್ಯಪ್ಪ ಮಾಸ್ತರ್ ವಂದಿಸಿದರು. ಶಿಕ್ಷಕಿ ಕು.ಅಶ್ವಿನಿ ಮುಂಡೋಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಯಶಸ್ವಿನಿ ಕೆ.ಎಸ್., ಜ್ಯೋತಿ, ದ್ರವ್ಯ ಹಾಗೂ ಅಡುಗೆ ಸಿಬ್ಬಂದಿಗಳು ಸಹಕರಿಸಿದರು.

ಸಭೆಯಲ್ಲಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಸುಜಾತ ಕುಮಾರಿ ಹಾಗೂ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.