ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ದೇವಚಳ್ಳ ಇದರ ಮೊದಲ ವಾರ್ಷಿಕ ಮಹಾಸಭೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ತಾಲೂಕು NRLM ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾ, ವಲಯ ಮೇಲ್ವಿಚಾರಕ ಅವಿನಾಶ್, ಬ್ಲಾಕ್ ಮ್ಯಾನೇಜರ್ ಮೇರಿ, BRPEP ಜಯಲಕ್ಷ್ಮಿ ಪಂಚಾಯತ್ ಸದಸ್ಯೆ ಸುಲೋಚನಾ ಮತ್ತು ಒಕ್ಕೂಟದ ಅಧ್ಯಕ್ಷರಾದ ಶೋಭಿತ ಹಾಗೂ ಒಕ್ಕೂಟದ ಸಂಜೀವಿನಿ ಸಿಬ್ಬಂದಿಗಳು ಮತ್ತು ಒಕ್ಕೂಟ ಪದಾಧಿಕಾರಿಗಳು ಮತ್ತು ಒಕ್ಕೂಟದ ಸದಸ್ಯರು ಹಾಗೂ ನೆಲ್ಲೂರು ಕೆಮ್ರಾಜೆ MBk ಮತ್ತು ಕೃಷಿ ಸಖಿ ಹಾಗೂ ಅಧ್ಯಕ್ಷರು ಭಾಗವಹಿಸಿದ್ದರು,ಈ ಸಭೆಯಲ್ಲಿ ಮೊದಲಿಗೆ ಯಶೋಧ ಬಾಳೆಗುಡ್ಡೆ ಇವರು ಅತಿಥಿಗಳನ್ನು ಸ್ವಾಗತ ಮಾಡಿದರು ನಂತರ ಹೂ ಗುಚ್ಚ ನೀಡಿ ಗೌರವಿಸಲಾಯಿತು.
ಒಕ್ಕೂಟದ ಸದಸ್ಯರು ಪ್ರಾರ್ಥಿಸಿದರು. ನಂತರ ಒಕ್ಕೂಟದ ಅಧ್ಯಕ್ಷರಾದ ಶೋಭಿತ ರವರು ಉದ್ಘಾಟಸಿದರು ಅದರೊಂದಿಗೆ ಸಂಜೀವಿನಿ ಒಕ್ಕೂಟದ ಸದಸ್ಯರು ಸಂಜೀವಿನಿ ಗೀತೆ ಹಾಡಿದರು. ನಂತರ ವಲಯ ಮೇಲ್ವಿಚಾರಕರಾದ ಅವಿನಾಶ್ ರವರು ಪದಾಧಿಕಾರಿಗಳ ಆಯ್ಕೆ ಬಗ್ಗೆ ಸವಿ ವಿವರವಾಗಿ ತಿಳಿಸಿದರು, ನಂತರ ತಾಲೂಕು ಕಾರ್ಯಕ್ರಮ ವ್ಯವsthaಪಕರಾದ ಶ್ವೇತಾರವರು ಸಂಜೀವಿನಿಯಿಂದ ಬರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು, ಹಾಗು ದೇವಚಳ್ಳ ಗ್ರಂಥಾಲಯ ಮೇಲ್ವಿಚಾರಕಿ ಪ್ರಫುಲ್ಲ ರವರು ಡಿಜಿಟಲ್ ಸಾಕ್ಷಾರತೆ ಬಗ್ಗೆ ಮಾಹಿತಿ ನೀಡಿದರು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯಶೋಧ ಬಾಳೆಗುಡ್ಡೆ, ಕಾರ್ಯದರ್ಶಿ ಶಶಿಕಲಾ, ಉಪಾಧ್ಯಕ್ಷರಾಗಿ ವಿಶಾಲಕ್ಷೀ, ಜತೆ ಕಾರ್ಯದರ್ಶಿ ಮೋಹಿನಿ, ಕೋಶಾಧಿಕಾರಿ ದೇವಕಿ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ವರದಿಯನ್ನು ಪಶುಸಖಿ ಭಾರತಿ ಲೆಕ್ಕ ಪರಿಶೋಧನೆ ಮಂಡನೆ ಯನ್ನು ಶಶಿಕಲಾ, ಪ್ರಾಸ್ತಾವಿಕ ನುಡಿಯನ್ನು ಕೃಷಿ ಸಖಿ ಸವಿತಾ, ನಿರೂಪಣೆ Mbk ಭಾರತೀಯವರು ಹಾಗು ಧನ್ಯವಾದವನ್ನು ಧನಲಕ್ಷ್ಮೀ
ಯವರು ಮಾಡಿರುತಾರೆ ನಂತರ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಭಾವಪೂರ್ಣ ಶ್ರದಾಂಜಲಿ ಪ್ರಯುಕ್ತ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.