ದೇವಾಲಯಗಳಲ್ಲಿ ವಿ.ಐ.ಪಿ ಸಂಸ್ಕೃತಿ ಬೇಡ, ಸಾತ್ವಿಕತೆ ಹೆಚ್ಚಾದಾಗ ದೇವರ ಸಾನಿಧ್ಯ ವೃದ್ಧಿಯಾಗುತ್ತದೆ, : ಲಕ್ಷ್ಮೀಶ ಗಬಲಡ್ಕ
ಇಂದು ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ
ಸುಬ್ರಹ್ಮಣ್ಯನು ಜ್ಞಾನದ ಅಧಿಪತಿ.ಸಂಗೀತ ಮತ್ತು ಕಲಾಪ್ರೀಯ.ಆಲಯಗಳಿಗೆ ನಾವುಗಳು ಹೃದಯಾಂತರಾಳದ ಭಕ್ತಿಯಿಂದ ಹೋಗಬೇಕು.ಸರ್ವರೂ ಭಗವಂತನಿಗೆ ಶರಣಾಗುವ ದೃಷ್ಟಿ ಯಿಂದ ದೇವಾಲಯಗಳಿಗೆ ಆಗಮಿಸಬೇಕು.ಅಂತರಂಗದಲ್ಲಿ ಭಗವಂತನನ್ನು ಕಾಣುವುದೇ ಧರ್ಮ.ಸಮಾಜವನ್ನು ಪೋಷಿಸುವುದು ಧರ್ಮ ಎಂದು ಧಾರ್ಮಿಕ ಉಪನ್ಯಾಸ ನೀಡಿದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹಾಗೂ ವಾಗ್ಮಿ ಲಕ್ಷ್ಮೀಶ ಗಬಲಡ್ಕ ಹೇಳಿದರು.
ಅವರು ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ದೇವಳದ ಕಿರುಷಷ್ಠಿ ಸಾಂಸ್ಕೃತಿಕ ವೇದಿಕೆಯಲ್ಲಿ 4 ದಿನಗಳ ಕಾಲ ನಡೆಯುವ ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡುತ್ತಾ ಮಾತನಾಡಿದರು.
ದೇವತೆಗಳು ಹವಿಸ್ಸನ್ನು ಪಡೆಯಲು ಒಟ್ಟಾಗಿರುತ್ತವೆ. ಹಾಗೇ ಜನರು ಒಳ್ಳೆಯದನ್ನು ಸ್ವೀಕರಿಸಲು ಸದಾ ಒಂದಾಗಿರಬೇಕು. ಒಂದು ಕಾಲದಲ್ಲಿ ದಂಡಿಸುವವರು ಇರಲಿಲ್ಲ, ಆದರೆ ಧರ್ಮ ಎಲ್ಲವನ್ನೂ ನಿಭಾಯಿಸುತ್ತಿತ್ತು ಆದರೆ ಈಗ ನಾವು ಧರ್ಮವನ್ನು ಅರ್ಥೈಸಿರುವುದರಲ್ಲಿ ತಪ್ಪಿದ್ದೇವೆ ಎಂದ ಅವರು ನಮ್ಮಲ್ಕಿ ಹಿಂದೂ ಧಾರ್ಮಿಕತೆ ಬೇಕು. ಧರ್ಮ ಅಂದರೆ ಸಚ್ಚಾರಿತ್ಯವಂತರಾಗಿರುವುದು. ಧರ್ಮ ಬುದ್ದಿಗೆ ಸಂಬಂಧಿಸಿದಲ್ಲ, ವೈಚಾರಿಕತೆಗೆ ಸಂಬಂಧಿಸಿದ್ದು ಎಂದರು. ಧರ್ಮ ಎಂದರೆ ಯಾವುದು ಪ್ರಜೆಯನ್ನು ಧಾರಣ ಮಾಡಿಸುತ್ತದೆಯೋ ಅದೇ ಧರ್ಮ ಎಂದರು. ದೇವಸ್ಥಾನದ ಸಾನಿಧ್ಯ ವೃದ್ದಿಯಾಗುವುದು ಯಾವಾಗ ಅಂದರೆ. ಅರ್ಚಕರು ಅನುಷ್ಠಾನ ಒಳ್ಳೆಯದಾದಾಗ,, ಆಡಳಿತದಲ್ಲಿರುವವರಲ್ಲಿ ಸಾತ್ವಿಕತೆ ಹೆಚ್ಚಾದಾಗ, ಸಿಬ್ಬಂದಿಗಳಲ್ಲಿ ದೇವರ ಸೇವೆ ಮಾಡಲು ದೇವರು ಕೊಟ್ಟ ಸುಕೃತಿ ಹೆಚ್ಚಾದಾಗ, ಭಕ್ತರಲ್ಲಿ ಇರುವ ನಂಬಿಕೆ ಹೆಚ್ಚಾದಾಗ ದೇವಸ್ಥಾನಗಳ ಸಾನಿಧ್ಯ ವೃದ್ಧಿ ಮಾಡಿಸುತ್ತದೆ ಎಂದರು.
ಆದರೀಗ
ಅರ್ಚಕರು ಸರಿಯಾಗಿ ಪ್ರಸಾದ ಕೋಡುತ್ತಿಲ್ಲ, ಭಕ್ತ ಸರಿಯಾಗಿ ಸ್ವೀಕರಿಸುತ್ತಿಲ್ಲ ಎಲ್ಲವೂ ಸರಿಯಾಗುತ್ತಾ ಹೋಗಲಿ ಎಂದ ಅವರು ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡಬಾರದು ಎಂದರು. ಪ್ರಸಾದ ಸ್ವೀಕಾರದಲ್ಲಿ ಬೇದ ಭಾವ ಬೇಡ, ದೇವಾಲಯಗಳಲ್ಲಿ ವಿ.ಐ.ಪಿ ಸಂಸ್ಕೃತಿ ಬೇಡ ಎಂದರು.
ಶಾಸಕಿ ಭಾಗೀರಥಿ ಮುರುಳ್ಯ
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದೇವಾಲಯದ ಆಡಳಿತಾಧಿಕಾರಿ, ಎ.ಸಿ ಜುಬಿನ್ ಮೊಹಾಪಾತ್ರ,
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ಸುಬ್ರಹ್ಮಣ್ಯ ಗ್ರಾ.ಪಂ ಸುಜಾತಾ ಕಲ್ಲಾಜೆ ಮುಖ್ಯ ಅತಿಥಿಗಳಾಗಿದ್ದರು.ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸ್ಥಳೀಯ ಸದಸ್ಯರಾದ ಸತೀಶ್ ಕೂಜುಗೋಡು, ಅಚ್ಚುತ್ತ ಗೌಡ ಬಳ್ಪ ವೇದಿಕೆಯಲ್ಲಿದ್ದರು.
ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ಮತ್ತು ಪುರೋಹಿತ ಕುಮಾರ ಭಟ್ ವೇದಘೋಷ ಮಾಡಿದರು.
ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸ್ವಾಗತಿಸಿದರು.ಅಭಿಯಂತರ ಉದಯ ಕುಮಾರ್ ವಂದಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.
ಇಂದು ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ
ಜ.3ರಂದು ನಟರಾಜ್ ಎಂಟರ್ ಟ್ರೈನರ್ಸ್ ಆಶ್ರಯದಲ್ಲಿ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ ರಾತ್ರಿ 7 ರಿಂದ 10 ರ ತನಕ ನಡೆಯಲಿದೆ.ಈ ಮೊದಲು ಸಂಜೆ 5 ರಿಂದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇವರಿಂದ ನೃತ್ಯ ಸಂಭ್ರಮ, ಬಳಿಕ ಮೂಡಬಿದಿರೆಯ ಶ್ರೀ ಆರಾಧನಾ ನೃತ್ಯ ಕೇಂದ್ರದ ಗುರು ವಿದುಷಿ ಸುಖದಾ ಬರ್ವೆ ಇವರ ಶಿಷ್ಯರಿಂದ ನೃತ್ಯ ಸಿಂಚನ ನೆರವೇರಲಿದೆ.