ನೆಲ್ಲೂರು ಕೆಮ್ರಾಜೆ : 13 ಲಕ್ಷದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ

0


ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ನಲ್ಲಿ 13 ಲಕ್ಷದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಇತ್ತೀಚೆಗೆ ನಡೆಯಿತು.


ಕೂಟೇಲು ರಸ್ತೆಗೆ ಶಾಸಕರ ಅನುದಾನದಲ್ಲಿ 5 ಲಕ್ಷ, ಕಿಲಾರ್ಕಜೆ ಬೆಟ್ಟ ರಸ್ತೆಗೆ ಪಂಚಾಯತ್ ಅನುದಾನದಲ್ಲಿ 2 ಲಕ್ಷ, ಎರ್ಮೆಟ್ಟಿ ಎಂಬಲ್ಲಿ ರಸ್ತೆಗೆ 2.62 ಲಕ್ಷ, ತುಂಬೆತ್ತಡ್ಕ ರಸ್ತೆ ಕಾಂಕ್ರಿಟೀಕರಣಕ್ಕೆ 2 ಲಕ್ಷ, ಬೆಟ್ಟ ಬೊಳ್ಳಾಜೆ ರಸ್ತೆಗೆ 1.4೦ ಲಕ್ಷ ಕಾಮಗಾರಿಗಳಿಗೆ ಗುದ್ದಲಿಪೂಜೆ ನಡೆಯಿತು.


ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಧನಂಜಯ ಕೋಟೆಮಲೆ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ವಿವಯಚಂದ್ರ ಸುಳ್ಳಿ, ಮಾಧವ ಸುಳ್ಳಿ, ವಿಘ್ನೇಶ್ವರ ಸುಳ್ಳಿ, ವೇಣುಗೋಪಾಲ ಮಂದ್ರಪ್ಪಾಡಿ, ಈಶ್ವರಪ್ಪ ಗೌಡ ಹರ್‍ಲಡ್ಕ, ಭೋಜಪ್ಪ ಗೌಡ ಹರ್‍ಲಡ್ಕ, ಜಯಂತ್ ಚಾಕೊಟೆಮೂಲೆ, ಅಚ್ಚುತ ಮುಂಡೋಕಜೆ, ವೇಣುಗೋಪಾಲ ತುಂಬೆತ್ತಡ್ಕ, ಅಶೋಕ್ ಕಿಲಾರ್ಕಜೆ ಮತ್ತಿತರರು ಉಪಸ್ಥಿತರಿದ್ದರು.