ಕುಂಬರ್ಚೋಡು ಮುಹಿಯದ್ದೀನ್ ಜುಮಾ ಮಸೀದಿ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆ ದಾರುಲ್ ಉಲೂಮ್ ಮದರಸದಲ್ಲಿ ಡಿ.27ರಂದು ನಡೆಯಿತು.
ಮಸೀದಿಯ ಅಧ್ಯಕ್ಷರಾದ ಹನೀಫ್ ಹಾಜಿ ಕೆ ಎಂ ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಸ್ಥಳೀಯ ಮಸೀದಿ ಖತಿಬರಾದ ಅಶ್ರಫ್ ಮುಸ್ಲಿಯಾರ್ ದುವಾ ನೆರೆವೇರಿಸಿದರು.
ವೇದಿಕೆಯಲ್ಲಿ ಸಲಹಾ ಸಮಿತಿ
ಸದಸ್ಯರಾದ ಆಮು ಹಾಜಿ,
,ಮದರಸ ಮುಹಲ್ಲಿಮ್ ರವೂಫ್ ಆಡೂರು ಉಪಸ್ಥಿತರಿದ್ದರು.ಪ್ರದಾನ
ಕಾರ್ಯದರ್ಶಿಯಾದ ಅಬ್ದುಲ್
ಖಾದರ್ ಅಕ್ಕರೆ ಕಳೆದ ಸಾಲಿನ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು.
ನಂತರ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ ಆಮು ಹಾಜಿ
ಸವಣೂರು,ಅಶ್ರಫ್ ಮುಸ್ಲಿಯಾರ್ ರವರನ್ನು ಆಯ್ಕೆ ಮಾಡಲಾಯಿತು.
ಬಳಿಕ ನೂತನ ಸಮಿತಿ ರಚಿಸಿ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಮಹಮ್ಮದ್ ಆಲಿ ಪೆರಾಜೆ
ಉಪಾಧ್ಯಕ್ಷರಾಗಿ ಅಬ್ದುಲ್ ಕರೀಂ ಬಿ ಎಮ್,ಕಾರ್ಯದರ್ಶಿಯಾಗಿ
ಅಬ್ದುಲ್ ಖಾದರ್ ಅಕ್ಕರೆ, ಖಜಾಂಜಿಯಾಗಿ ಆಬ್ಬಾಸ್ ,ಜೊತೆ ಕಾರ್ಯದರ್ಶಿಯಾಗಿ
ಆಶ್ರಫ್ ಪ್ರಗತಿ,ಸಮಿತಿ ಸದಸ್ಯರುಗಳಾಗಿ ಹನೀಫ್ ಹಾಜಿ ಕೆ ಎಂ ಕರೀಂ ಡಿ ಎಂ
ಇವರನ್ನು ಆಯ್ಕೆ ಮಾಡಲಾಯಿತು.