ಕೊಡಿಯಾಲ : ಶ್ರೀ ಗೌರಿ ಸಂಜೀವಿನಿ ಒಕ್ಕೂಟದ ಮಹಾಸಭೆ

0

ಶ್ರೀ ಗೌರಿ ಸಂಜೀವಿನಿ ಒಕ್ಕೂಟ ಕೊಡಿಯಾಲ ಇದರ 2023-24ನೇ ಸಾಲಿನ ಮಹಾಸಭೆಯು ಮಾ. 26 ರಂದು ಕೊಡಿಯಾಲ ಪಂಚಾಯತ್ ಆವರಣದಲ್ಲಿ ಒಕ್ಕೂಟದ ಅಧ್ಯಕ್ಷರ ಸಮ್ಮುಖದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಜೀವಿನಿ ಸಂಘವು ಗ್ರಾಮದಲ್ಲಿ ಒಳ್ಳೆಯ ರೀತಿಯಲ್ಲಿ ಕೆಲಸ ನಿರ್ವಹಿಸಿ ಗ್ರಾಮ ಪಂಚಾಯತ್ನಲ್ಲಿ ಸಂಜೀವಿನಿ ಸಂಘದ ಸದಸ್ಯರ ಮಹಾತ್ವದ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರ್ಷನ್ ಕೆ. ಟಿ ತಿಳಿಸಿ ಶುಭ ಹಾರೈಸಿದರು.

ವಲಯ ಮೇಲ್ವಿಚಾರಕರಾದ ಮಹೇಶ್ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ಒಕ್ಕೂಟದ ವರದಿ ಹಾಗೂ 2023-2024 ನೇ ಸಾಲಿನ ಲೆಕ್ಕಪರಿಶೋಧನ ವರದಿಯನ್ನು MBK ರಮ್ಯಾ ಮಂಡಿಸಿದರು. ಉತ್ತಮ ಸಂಘವೆಂದು ಒಂದು ಸಂಘವನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಯಿತು ಹಾಗೂ ಜಯಂತಿ ಮತ್ತು ಲೀಲಾವತಿ ಇಬ್ಬರು ಮಹಿಳೆ ಯರಿಗೆ ಸನ್ಮಾನ ಮಾಡಲಾಯಿತು.ಇದರೊಂದಿಗೆ ಆಟೋಟ ಸ್ಪರ್ಧೆಯ ಬಹುಮಾನ ವನ್ನು ಹಂಚಲಾಯಿತು ಈ ಸಭೆಯಲ್ಲಿ nrlm ಕೃಷಿ ಜೀವನಪಾಯ ಮೇಲ್ವಿಚಾರಕರಾದ ಜೀವನ್ ಪ್ರಕಾಶ್,ಕೆನರಾ ಬ್ಯಾಂಕ್ ಆರ್ಥಿಕ ಸಲಹೆಗಾರರದ ಶ್ರೀಮತಿ ಸುಜಾತಾ ಒಕ್ಕೂಟದ ಕಾರ್ಯದರ್ಶಿ ಉಪಸ್ಥಿರಿದ್ದರು. ಇದರೊಂದಿಗೆ ಪೆರುವಾಜೆ, ಮುರುಲ್ಯ,ಕಳಂಜ mbk ಯವರು, ಒಕ್ಕೂಟ ದ ಪದಾಧಿಕಾರಿಗಳು ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿಗಳು ಮತ್ತು ಕೊಡಿಯಾಲ ಗ್ರಂಥಪಾಲಕಿ ಉಪಸ್ಥಿತರಿದ್ದರು.ಶ್ರೀಮತಿ ಯಶೋದಾ ಕಾರ್ಯಕ್ರಮವನ್ನು ನಿರೂಪಿಸಿದರು. Lcrp ವನಿತಾ ಪ್ರಾರ್ಥಿಸಿ. Lcrp ಯೋಗಿನಿ ಸ್ವಾಗತಿಸಿದರು. ಗಣ್ಯರಿಗೆ ಸ್ಮರಣಿಗೆ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಕೃಷಿ ಸಖಿ ರೇಖಾ ಧನ್ಯವಾದ ನೀಡಿ ರಾಷ್ಟ್ರ ಗೀತೆಯೊಂದಿಗೆ ಮಹಾಸಭೆಯನ್ನು ಕೊನೆಗೊಳಿಸಲಾಯಿತು.