ಸುಳ್ಯದ 108 ಅಂಬ್ಯುಲೆನ್ಸ್ ಟಯರ್ ಸವೆದರೂ ಇನ್ನೂ ಬದಲಾಯಿಸಿಲ್ಲ : ಅಪಾಯದಲ್ಲಿ 108 ವಾಹನ

0

ಸುಳ್ಯದ 108 ಅಂಬ್ಯುಲೆನ್ಸ್ ಟಯರ್ ಸವೆದು ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ತಲುಪಿರುವುದಾಗಿ ತಿಳಿದುಬಂದಿದೆ.

ಕಳೆದ ಒಂದು ವಾರದಿಂದ ಸುಳ್ಯದ 108 ವಾಹನ ಸ್ಥಿತಿ ಹೀಗಾದರೆ, ಕಡಬದ ವಾಹನ ಒಂದು ತಿಂಗಳಿಂದ ಇದೇ ಸಮಸ್ಯೆ ಎದುರಿಸುತ್ತಿರುವುದಾಗಿ ತಿಳಿದುಬಂದಿದೆ. ಟವರ್ ಸವೆದು ವಾಹನ ಸಂಚಾರಕ್ಕೆ ಯೋಗ್ಯವಾಗಿರದ ವಿವರವನ್ನು ಈಗಾಗಲೇ ಸುಳ್ಯ ಶಾಸಕರ ಗಮನಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು 108 ಉದ್ಯೋಗಿ ಹಿಮಕರ ಕಾಡುಪಂಜರನ್ನು ವಿಚಾರಿಸಿದಾಗ, ಟಯರ್ ಸವೆದಿರುವುದು ನಿಜ.‌ ಟಯರ್ ಬದಲಾಯಿಸದಿದ್ದರೆ ಸಂಚಾರ‌ ಕಷ್ಟ. ಈ ಕುರಿತು‌ ಶಾಸಕರಿಗೆ ಮಾಹಿತಿ ನೀಡಲಾಗಿದೆ. ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.