ಆಲೆಟ್ಟಿ ಗ್ರಾಮದ ಅರಂಬೂರು ಇಡ್ಯಡ್ಕ ಶ್ರೀಮತಿ ದೇವಕಿ ಪರಿವಾರಕಾನ ರವರ ಶ್ರದ್ಧಾಂಜಲಿ ಕಾರ್ಯಕ್ರಮ ವು ಪರಿವಾರಕಾನ ಮನೆಯಲ್ಲಿ ಜ.4 ರಂದು ನಡೆಯಿತು.
ಈ ಸಂದರ್ಭದಲ್ಲಿ ಮೃತರ ಜೀವನಗಾಥೆಯ ಬಗ್ಗೆ ಸ್ಥಳೀಯ ಸಾಮಾಜಿಕ ಧುರೀಣರಾದ ಬಾಪೂ ಸಾಹೇಬ್ ರವರು ನುಡಿ ನಮನ ಸಲ್ಲಿಸಿದರು. ಪಾಡಿ ಶ್ರೀಪುಳ್ಳಿ ಕರಿಂಗಾಳಿ ಭಗವತಿ ಕ್ಷೇತ್ರದ ಸ್ಥಾನಿಕರು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದರು. ಪವಿತ್ರನ್ ಗುಂಡ್ಯ ಕಾರ್ಯಕ್ರಮ ನಿರ್ವಹಿಸಿದರು. ಪುತ್ರರಾದ ನಾರಾಯಣ ಪರಿವಾರಕಾನ, ರಾಧಾಕೃಷ್ಣ ಪರಿವಾರಕಾನ, ಪುತ್ರಿಯರಾದ ಜಯಶೀಲಾ, ಸರಸ್ವತಿ, ಸೊಸೆಯಂದಿರಾದ ಶಾರದಾ, ಶಾಲಿನಿ, ರುಕ್ಮಿಣಿ ಗಣೇಶ್ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.