ಗುತ್ತಿಗಾರು ಪ್ರಾ.ಆ.ಕೇಂದ್ರದಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಡಿ. 31ರಂದು ವಯೋನಿವೃತ್ತಿ ಹೊಂದಿದ ಪದ್ಮವೇಣಿ ಕುಡೆಕಲ್ಲುರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಡಿ. 31ರಂದು ಗುತ್ತಿಗಾರು ಪ್ರಾ.ಆ.ಕೇಂದ್ರದ ಸಭಾಂಗಣದಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ನಿವೃತ್ತರಿಗೆ ಶುಭ ಹಾರೈಸಿದರು.
ತಾಲೂಕಿನ ವಿವಿಧ ವೈದ್ಯಾಧಿಕಾರಿಗಳು, ಹಿರಿಯ ಪ್ರಾ.ಆ. ಸುರಕ್ಷಾಧಿಕಾರಿಗಳು, ಗುತ್ತಿಗಾರು ಮತ್ತು ಕೊಲ್ಲಮೊಗ್ರ ಪ್ರಾ.ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು. ನಿವೃತ್ತರಾದ ಪದ್ಮವೇಣಿ ಮತ್ತು ಅವರ ಪತಿ ಚಂದ್ರಶೇಖರ ಕುಡೆಕಲ್ಲುರವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಅತಿಥಿಗಳು ಶುಭ ಹಾರೈಸಿದರು.