ಯಕ್ಷಗಾನ ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಗೆ ಗೌರವಾರ್ಪಣೆ
ಯಕ್ಷಗಾನ ಕಲಾಭಿಮಾನಿ ಮಿತ್ರರು ಎಲಿಮಲೆ – ಗುತ್ತಿಗಾರು ಸಂಯೋಜನೆಯಲ್ಲಿ
ಹನುಮಗಿರಿ ಮೇಳದ ಯಕ್ಷಗಾನ “ಪಾರಿಜಾತ | ಅಕ್ಷಯಾಂಬರ | ಕುಶ-ಲವ” .
ಡಿ.31 ರ ಸಂಜೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ತೆಂಕು ತಿಟ್ಟಿನ ಅಗ್ರಮಾನ್ಯ ಬಣ್ಣದ ವೇಷದಾರಿಗಳಾದ ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ ಅವರಿಗೆ ಗೌರವಿಸುವ ಕಾರ್ಯಕ್ರಮ ನಡೆಯಿತು. ರಾಮಕೃಷ್ಣ ಭಟ್ ರೆಂಜಾಳ ಅವರು ಹಾರ, ಫಲಪುಷ್ಪ, ಕಾಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಸಂಘಟಕರೋರ್ವರಾದ ಹರಿಸುಬ್ರಹ್ಮಣ್ಯ ಪುಚ್ಚಪ್ಪಾಡಿ, ಮಹೇಶ್ ಪುಚ್ಚಪ್ಪಾಡಿ, ವಳಲಂಬೆ ದೇವಸ್ಥಾನ ವ್ಯವಸ್ಥಾಪಕ ಸಮಿತಿ ಯ ಮಾಜಿ ಅಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಹನುಮಗಿರಿ ಮೇಳದ ಮೆನೇಜರ್ ಹರೀಶ್ ಬೊಳಂತಿಮೊಗೇರು ಮತ್ತಿತರರು ಉಪಸ್ಥಿತರಿದ್ದರು.