ತಾಲೂಕು ವ್ಯಾಪ್ತಿಯ ಸರಕಾರಿ ಶಾಲೆಗಳಿಗೆ ಈ ವಿಜ್ಞಾನ ಪ್ರಯೋಗಾಲಯ ಮಾದರಿ:ಗಣ್ಯರ ಒಮ್ಮತದ ಅಭಿಪ್ರಾಯ
ಗಾಂಧಿನಗರ: ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮುತ್ತೋಟ್ ಫೈನಾನ್ಸ್ ಸಂಸ್ಥೆಯ ಸಹಕಾರದಿಂದ ಸುಮಾರು 4.12 ಲಕ್ಷ ವೆಚ್ಚದಿಂದ ನಿರ್ಮಿಸಿದ ಮಾದರಿ ವಿಜ್ಞಾನ ಪ್ರಯೋಗಾಲಯ ಜ 3 ರಂದು ಉದ್ಘಾಟನೆ ಗೊಂಡಿತು.
ನೂತನ ಪ್ರಯೋಗಾಲಯವನ್ನು ಸುಳ್ಯ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶ್ರೀಮತಿ ಆಶಾ ರವರು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ,ತಾಲೂಕು ಶಿಕ್ಷಣ ಸಂಯೋಜನಾ ಅಧಿಕಾರಿ ಶ್ರೀಮತಿ ಧನ ಲಕ್ಷ್ಮಿ,ಕೆ ಪಿ ಎಸ್ ಉಪಾಧ್ಯಕ್ಷ ಚಿದಾನಂದ ಕುದ್ಪಾಜೆ,
ಪ್ರಯೋಗಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಪುತ್ತೂರು ಕ್ಲಸ್ಟರ್ ಮೆನೇಜರ್ ಪವಿತ್ರ ಕುಮಾರ್, ಶ್ರೀಮತಿ ಪ್ರತಿಮಾ ಕಾಮತ್ ಸುಳ್ಯ ಮೆನೇಜರ್,ಸಿ ಎಸ್ ಆರ್ ಮೆನೇಜರ್ ಪ್ರಶಾದ್,ನ.ಪಂ ಸದಸ್ಯರುಗಳಾದ ಎಂ ವೆಂಕಪ್ಪ ಗೌಡ, ಶರೀಫ್ ಕಂಠಿ, ಶಾಲಾ ಪ್ರಾಂಶುಪಾಲೆ ಶ್ರೀಮತಿ ಪರಮೇಶ್ವರಿ,ಉಪ ಪ್ರಾಂಶುಪಾಲೆ ಜ್ಯೋತಿ ಲಕ್ಷ್ಮಿ, ಸಿ ಆರ್ ಪಿ ಮಮತಾ,ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಿನ್ನಪ್ಪ ಗೌಡ, ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಇಬ್ರಾಹಿಂ ಕೆ ಬಿ,ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮ ಕೃಷ್ಣ ರೈ, ಕೋಟೆ ಫೌಂಡೇಶನ್ ಇದರ ಪ್ರದೀಪ್, ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಮೇಲ್ವಿಚಾರಕರು ಶ್ರೀಮತಿ ಜಯಶ್ರೀ,ಪ್ರಯೋಗಾಲಯ ನಿರ್ಮಾತ ಶಾಲಾ ವಿಜ್ಞಾನ ಶಿಕ್ಷಕ ಇಬ್ರಾಹಿಂ,ಹಾಗೂ ಎಲ್ಲಾ ಶಿಕ್ಷಕ ವೃಂದದವರು, ಕಾಲೇಜ್ ಉಪನ್ಯಾಸಕರು, ಶಾಲಾ ಸಮಿತಿ ಸದಸ್ಯರುಗಳು, ಹಾಗೂ ಪೋಷಕರುಗಳು ಭಾಗವಹಿಸಿದ್ದರು.
ಪ್ರಯೋಗಾಲಯದ ವಿಶೇಷತೆ
ಶಾಲೆಯ ಶಿಕ್ಷಕರು,ಮತ್ತು ಎಸ್ ಡಿ ಎಮ್ ಸಿ ಯು ತಮ್ಮ ಸಂಸ್ಥೆಯಲ್ಲಿ ಗುಣ ಮಟ್ಟದ ಶಿಕ್ಷಣವನ್ನು ನೀಡಲು ಹಲವಾರು ಕಾರ್ಯ ಯೋಜನೆಗಳನ್ನು ಹೊಂದಿದೆ. ಅದರ ಭಾಗವಾಗಿ, ಪ್ರೌಢ ಶಾಲಾ ಮಟ್ಟದಲ್ಲಿ ಜಿಲ್ಲೆಯಲ್ಲಿರುವ ಇತರ ಶಾಲೆಗಳಿಗೆ ಮಾದರಿಯಾಗಬಲ್ಲ ಒಂದು ವ್ಯವಸ್ಥಿತ ವಿಜ್ಞಾನ ಪ್ರಯೋಗಾಲಯವನ್ನು ನಿರ್ಮಿಸಿದೆ.ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತಿ ಲಕ್ಷ್ಮೀಯವರ ಮೇಲುಸ್ತುವಾರಿಯಲ್ಲಿ ವಿಜ್ಞಾನ ಶಿಕ್ಷಕರಾದ ಇಬ್ರಾಹಿಂರವರು ಮುತ್ತುಟ್ ಫೈನಾನ್ಸ್ ನವರು ನೀಡಿದ ನಾಲ್ಕು ಲಕ್ಷದ ಹನ್ನೆರಡು ಸಾವಿರ ರೂಪಾಯಿಗಳ ದೇಣಿಗೆಯನ್ನು ಸಮರ್ಪಕವಾಗಿ ಬಳಸಿ ಅತ್ಯುತ್ತಮವಾದ ಮಾದರಿ ಪ್ರಯೋಗಾಲಯವನ್ನು ನಿರ್ಮಿಸಿದ್ದಾರೆ. ಶಾಲೆಯ ಉಳಿದ ಎಲ್ಲಾ ಶಿಕ್ಷಕರು ಮತ್ತು ಎಸ್ ಡಿ ಎಮ್ ಸಿ ಕಾರ್ಯಧ್ಯಕ್ಷರು ಈ ಮಹಾತ್ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಈ ಪ್ರಯೋಗ ಶಾಲೆಯಲ್ಲಿ ಹೈ ಸ್ಕೂಲ್ ಹಂತದ ವಿಜ್ಞಾನ ವಿಷಯದ ಬಹುತೇಕ ಪ್ರಯೋಗಗಳ ಪ್ರಾತ್ಯಕ್ಷಿಕೆಗಳನ್ನು ಮಾಡಿ ತೋರಿಸುವ ವ್ಯವಸ್ಥೆ ಇದೆ. ವಿಜ್ಞಾನ ವಿಷಯದಲ್ಲಿ ಬರುವ ಸುಮಾರು 30 ಚಿತ್ರಗಳ ಥರ್ಮೋಕಾಲ್ ಮಾಡೆಲ್ ಗಳು ಆಕರ್ಷಣೀಯವಾಗಿದೆ.
ಸುಮಾರು 60 ಜನ ವಿಜ್ಞಾನಿಗಳ ಭಾವಚಿತ್ರ ಹಾಗೂ ಸರಳ ವಿವರಣೆ ಹೊಂದಿರುವ ಚಾರ್ಟ್ ಗಳನ್ನು ಪ್ರಯೋಗ ಶಾಲೆಯ ಗೋಡೆಗೆ ಕ್ರಮಬದ್ದವಾಗಿ ಜೋಡಿಸಲಾಗಿದೆ. ವಿಜ್ಞಾನ ವಿಷಯದ ವಿವಿಧ ಪರಿಕಲ್ಪನೆಗಳ ಸುಮಾರು 200 ರಷ್ಟು ಚಾರ್ಟ್ ಗಳನ್ನು ಲ್ಯಾಮಿ ನೇಷನ್ ಮಾಡಿ ಇಡಲಾಗಿದೆ. ಭೌತ ಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ ಹಲವಾರು ಮಾಡೆಲ್ ಗಳು ಈ ಪ್ರಯೋಗಾಲಯದಲ್ಲಿ ಜೋಡಿಸಲಾಗಿದೆ.
ಪ್ರಯೋಗಾಲಯದಲ್ಲಿರುವ ಎಲ್ಲಾ ವಸ್ತುಗಳು ಸುಲಭವಾಗಿ ಗೋಚರಿಸುವಂತೆ ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಶಿಕ್ಷಕ ಇಬ್ರಾಹಿಂ ರವರು ತನ್ನ ಬೇಸಿಗೆ ರಜಾ ದಿನಗಳನ್ನು ಸಂಪೂರ್ಣವಾಗಿ ಈ ಪ್ರಯೋಗ ಶಾಲೆಯಲ್ಲಿರುವ ಥರ್ಮೋಕಾಲ್ ಮಾಡೆಲ್ ಗಳನ್ನು ಮತ್ತು ಫೋಮ್ ಚಾರ್ಟ್ ಗಳನ್ನು ತಯಾರಿಸಲು ಮೀಸಲಿಟ್ಟಿದ್ದು ಅವರ ಆರು ತಿಂಗಳ ಸತತ ಪರಿಶ್ರಮ , ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತಿ ಲಕ್ಷ್ಮೀಯವರ ಮೇಲುಸ್ತುವಾರಿ,ಹಾಗೂ ಶಿಕ್ಷಕರುಗಳಾದ ಚಿನ್ನಪ್ಪ ಗೌಡ,ಪದ್ಮಿನಿ , ಶ್ರೀಮತಿ ಸಹನಾಜ್, ಶ್ರೀಮತಿ ಶೈನಿ, ಶ್ರೀಮತಿ ಯಶ್ವಿನಿ ಮತ್ತು ಶ್ರೀಮತಿ ಯಮುನಾ ರವರ ಸಹಕಾರ ಹಾಗೂ ಮುತ್ತೂಟ್ ಫೈನಾನ್ಸ್ ಅವರ ಆರ್ಥಿಕ ಸಹಾಯದ ಪರಿಣಾಮವಾಗಿ ಈ ಸುಂದರ ವಾದ ಪ್ರಯೋಗಾಲಯದ ನಿರ್ಮಾಣ ಆಗಿದ್ದು ಸುಳ್ಯ ತಾಲೂಕಿನಲ್ಲಿ ಮಾದರಿ ವಿಜ್ಞಾನ ಕೇಂದ್ರವಾಗಿ ಮೂಡಿ ಬಂದಿದೆ.