ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಸಭೆಯು ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಿ.ಕೆಯವರ ಅಧ್ಯಕ್ಚತೆಯಲ್ಲಿ ಜ.04 ರಂದು ಸುಳ್ಯ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ಪ್ರಭಾರಿ ಯಶಸ್ವಿನಿ ಶಾಸ್ತ್ರಿ,ಮಂಡಲದ ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಾಹ್ನವಿ ಕಾಂಚೋಡು,ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಕಲಾ. ಎ, ಲೋಲಾಕ್ಷಿ ದಾಸನ ಕಜೆ,ಕಾರ್ಯದರ್ಶಿಗಳಾದ ಭಾರತಿ ಪುರುಷೋತ್ತಮ್, ಆಶಾ ರೈ ಕಲಾಯಿ , ಸದಸ್ಯರುಗಳಾದ ಮೋಹಿನಿ ಕಟ್ಟ,ಶಕುಂತಳಾ ಕೇವಳ, ಸುಮತಿ ಜಯನಗರ, ದಿವ್ಯಾ ಪೆರಾಲು, ದಿವ್ಯಾ ಮಡಪ್ಪಾಡಿ,ಸುಜಾತಾ ಐವರ್ನಾಡು ಉಪಸ್ಥಿತರಿದ್ದರು.
ಈ ಸಂಧರ್ಭ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆ ಯಾದ ಮೋಹಿನಿ ಕಟ್ಟ ಇವರನ್ನು ಗೌರವಿಸಲಾಯಿತು. ಹಾಗೂ ಸಾವಯವ ಕೃಷಿ ಸಲುವಾಗಿ ಆಶಾ ರೈ ಇವರು ಎರೆಹುಳು ಗೊಬ್ಬರದ ಬಗ್ಗೆ ಮಾಹಿತಿ ನೀಡಿದರು.
ಲೋಲಾಕ್ಷಿ ಸ್ವಾಗತಿಸಿ ಭಾರತಿ ಪುರುಷೋತ್ತಮ್ ವಂದಿಸಿದರು.