ಎಡಮಂಗಲ ಮಾಲೆಂಗಿರಿ ಸೇತುವೆಯು ಇತ್ತೀಚೆಗೆ ಕುಸಿದು ಬಿದ್ದಿದ್ದು,ಶಾಸಕರ ಮಾರ್ಗದರ್ಶನ ಊರಿನವರ ಸಹಕಾರದಿಂದ ಗಟ್ಟಿಯಾದ ತಾತ್ಕಾಲಿಕ ಸೇತುವೆ ನಿರ್ಮಾಣವಾಗಿತ್ತು, ಇದೀಗ ಲೋಕೋಪಯೋಗಿ ಇಲಾಖೆಯಿಂದ ಹೊಸ ಸೇತುವೆ ನಿರ್ಮಾಣಕ್ಕಾಗಿ 30 ಲಕ್ಷ ಬಿಡುಗಡೆಗೊಂಡಿದ್ದು ಜ. 5 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ತೆಂಗಿನಕಾಯಿ ಒಡೆದು ಗುದ್ದಲಿ ಪೂಜೆ ನೆರವೇರಿಸಿದರು,
ಎಡಮಂಗಲ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು ದೀಪ ಪ್ರಜ್ವಲನೆ ಮಾಡಿ, ಸ್ವಾಗತಿಸಿ, ವಂದಿಸಿದರು. ಪಂ. ಮಾಜಿ ಅಧ್ಯಕ್ಷ ಗೀತಾ ಪ್ರವೀಣ್, ಉಪಾಧ್ಯಕ್ಷ ದಿವ್ಯ ಯೋಗಾನಂದ ,ಪಂ. ಸದಸ್ಯರು, ಎಡಮಂಗಲ ಸೊಸೈಟಿ ನಿರ್ದೇಶಕರು, ಹಾಲು ಸೊಸೈಟಿ ಮಾಜಿ ಅಧ್ಯಕ್ಷ ಜಯಪ್ರಕಾಶ್ ಲೆಕ್ಕಿಸಿರಿ ಮಜಲು , ಹಾಲು ಸೊಸೈಟಿ ಕಾರ್ಯದರ್ಶಿ ಮಾಧವ ಎರ್ಕ, ಈಶ್ವರ ಜಾಲ್ತಾರ್, ಶಿವಪ್ರಸಾದ್ ನೂಚಿಲ, ಹೊನ್ನಪ್ಪ ಗೌಡ, ಸೇತುವೆಗೆ ಜಾಗ ಬಿಟ್ಟುಕೊಟ್ಟ ಸದಾಶಿವ ರೈ ಮಾಲೆಂಗಿರಿ, ಮೇದಪ್ಪ ಮಾಲೆಂಗಿರಿ, ಅಜಿತ್ ರೈ ಮಾಲೆಂಗಿರಿ, ಶಿವಪ್ರಸಾದ್ ಮಾಲೆಂಗಿರಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಗಿರೀಶ್ ನಡುಬೈಲು, ಇನ್ನಿತರ ಸೇತುವೆ ಪಲಾನುಭವಿಗಳು ಉಪಸ್ಥಿತರಿದ್ದರು.
(ವರದಿ: ಎ.ಎಸ್.ಎಸ್.)