ಐನೆಕಿದು ಗ್ರಾಮದ ಇಜ್ಜಿನಡ್ಕ ಕುಟುಂಬಸ್ಥರ ದೈವಗಳ ನೇಮೋತ್ಸವ ಜ. 11 ಮತ್ತು 12 ರಂದು ನಡೆಯಿತು.
ಜ. 11ರಂದು ಸಂಜೆ ದೈವಗಳ ಭಂಡಾರ ತೆಗೆದು ಕುಕ್ಕೆತ್ತಿಬಳ್ಳು, ಸತ್ಯದೇವತೆ, ಕಲ್ಲುರ್ಟಿ, ಕೊರತ್ತಿ ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವದ ನೇಮ ನಡೆಯಿತು.
12 ರಂದು ಬೆಳಿಗ್ಗೆ ಧರ್ಮದೈವ, ಶ್ರೀ ರುದ್ರ ಚಾಮುಂಡಿ ದೈವ ಹಾಗೂ ಗುಳಿಗ ದೈವದ ನೇಮ ನಡೆಯಿತು.
ಇಜ್ಜಿನಡ್ಕ ಕುಟುಂಬಸ್ಥರು ಹಾಗೂ ಬಂಧುಗಳು ದೈವದ ಗಂಧ ಪ್ರಸಾದ ಸ್ವೀಕರಿಸಿದರು.
ವರದಿ : ಡಿ.ಹೆಚ್