ಸೋಣಂಗೇರಿ-ಗುತ್ತಿಗಾರು ರಸ್ತೆಯ ಮಿತ್ತಮಜಲು ಬಳಿ ಬೈಕ್ -ಪಿಕಪ್ ಅಪಘಾತ

0

ಸೋಣಂಗೇರಿ-ಗುತ್ತಿಗಾರು ರಸ್ತೆಯ ಮಿತ್ತಮಜಲು ಬಳಿ ಬೈಕ್ -ಪಿಕಪ್ ಅಪಘಾತ ಸಂಭವಿಸಿದ ಘಟನೆ ಇದೀಗ ಸಂಭವಿಸಿದೆ. ಸೋಣಂಗೇರಿ ಕಡೆಯಿಂದ ದುಗಲಡ್ಕ ಕಡೆಗೆ ಹೋಗುವ ಪಿಕಪ್‌ಗೆ ದುಗಲಡ್ಕ ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.