ಆಲೆಟ್ಟಿ ಗ್ರಾಮದ ಕೆಳಗಿನ ಆಲೆಟ್ಟಿ ಪ್ರಗತಿಪರ ಕೃಷಿಕರಾದ ಕುರಿಂಜ ತರವಾಡು ಮನೆಯ ಯಜಮಾನರಾದ ನಾರಾಯಣ ಮಣಿಯಾಣಿ ಅವರು ವಯೋಸಹಜ ಅಸೌಖ್ಯದಿಂದಾಗಿ ಜ.13ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 92ವರ್ಷ ವಯಸ್ಸಾಗಿತ್ತು.
ನಾರಾಯಣ ಮಣಿಯಾಣಿ ಅವರು ಆಲೆಟ್ಟಿ ಪಂಜಿಮಲೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಸಮಿತಿ ಅಧ್ಯಕ್ಷರಾಗಿ, ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಕಂಬಳ ಅಭಿಮಾನಿಯಾಗಿ, ಕನೆಹಲಗೆ ಮತ್ತು ಅಡ್ಡಹಲಗೆ ವಿಭಾಗದಲ್ಲಿ ಪರಿಣತಿ ಪಡೆದಿದ್ದ, ಇವರು ಕಂಬಳದ ಕೋಣಗಳನ್ನು ಸಾಕಿ ಹಲವಾರು ಕಂಬಳ ಕೂಟದಲ್ಲಿ ಭಾಗವಹಿಸಿ, ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ರಾಜ್ಯ ಸರ್ಕಾರದ ವತಿಯಿಂದ ತಾಲೂಕು ಕೃಷಿ ಇಲಾಖೆಯ ಮೂಲಕ ಅತ್ಯುತ್ತಮ ಭತ್ತ ಕೃಷಿಕ ಪ್ರಶಸ್ತಿಯನ್ನು ಪಡೆದಿದ್ದರು.
ಮೃತರು ಪತ್ನಿ ಸೀತಮ್ಮ, ಪುತ್ರರಾದ ಅಚ್ಚುತ ಮಣಿಯಾಣಿ ಆಲೆಟ್ಟಿ, ಸುಂದರ ಆಲೆಟ್ಟಿ, ರಾಮಚಂದ್ರ ಆಲೆಟ್ಟಿ, ಪುತ್ರಿಯರಾದ ಶ್ರೀಮತಿ ಇಂದಿರಾ , ಶ್ರೀಮತಿ ಮೀನಾಕ್ಷಿ, ಶ್ರೀಮತಿ ಲೀಲಾವತಿ, ಶ್ರೀಮತಿ ರಾಜೀವಿ ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.