ಎಡಮಂಗಲ ಗ್ರಾಮದ ನಾಕೂರು ಗಯ ಹಿತರಕ್ಷಣಾ ಸಮಿತಿ ವತಿಯಿಂದ ಜ. 26ರಂದು ನಡೆಯಲಿರುವ ಗಣಹೋಮ, ಗೋಪಾಲಕೃಷ್ಣ ದೇವರ ಪೂಜೆ ಮತ್ತು ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಜ. 13ರಂದು ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ದೇವರಿಗೆ ಸಮರ್ಪಿಸಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಹರಿ ನೂಚಿಲ, ದೇವಸ್ಥಾನದ ಅರ್ಚಕರಾದ ರಮೇಶ್ ಭಟ್ ನೂಚಿಲ, ಶ್ಯಾಮ್ ಭಟ್ ನಡುಬೈಲ್, ನಾಕೂರು ಗಯ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಪುಳಿಕುಕ್ಕು, ಉಪಾಧ್ಯಕ್ಷ ಆನಂದ ಕೊಡಂಗೆ, ಪ್ರಸಾದ್ ಮಜಲಕರೆ, ರಾಘವ ಪೂಜಾರಿ ಮತ್ತು ದೇವಸ್ಥಾನದ ಸಿಬ್ಬಂದಿ ರವೀಂದ್ರ ಮೂಲಂಗೇರಿ ಉಪಸ್ಥಿತರಿದ್ದರು.