ಸುಳ್ಯದ ಯುವ ಲೇಖಕ ಅನಿಂದಿತ್ ಗೌಡ ಅವರು ನವ ದೆಹಲಿಯ ಭಾರತೀಯ ಜನತಾ ಪಾರ್ಟಿ ಕೇಂದ್ರ ಕಾರ್ಯಾಲಯದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ, ತಮ್ಮ ರಚನೆಯಾದ “ರಿಕಾಲಿಂಗ್ ಅಮರ ಸುಳ್ಯ” (ಆಂಗ್ಲ ಭಾಷೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ) ಹಾಗೂ ಕನ್ನಡ ಕಿರು-ಪುಸ್ತಕ “ಸತ್ಯವೇ ಆರಿಸಿಕೊಂಡ ಸತ್ಯ ದರ್ಶನ” ಇವುಗಳ ಗೌರವ ಪ್ರತಿಗಳನ್ನು ಹಸ್ತಾಂತರಿಸಿದರು.
ಅನಿಂದಿತ್ ಅವರು ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ನ ಮ್ಯಾನೇಜಿಂಗ್ ಟ್ರಸ್ಟಿ ಆಗಿದ್ದು, ಫೌಂಡೇಶನ್ ಆಶಯಗಳು ಹಾಗೂ ಯೋಜನೆಗಳ ಕುರಿತು ಚರ್ಚಿಸಿ, ಮಾರ್ಗದರ್ಶನವನ್ನು ಕೋರಿದರು.