ಉದ್ಬವ ಕ್ಷೇತ್ರ ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ದಲ್ಲಿ ಶ್ರೀ ಶಂಖಚೂಡ ದೇವರ ಪುನರ್ ಪ್ರತಿಷ್ಠೆ, ಬಹ್ಮಕಲಶೋತ್ಸವ ವೈಭವದಿಂದ
ಜ.19 ರಂದು ನಡೆಯಿತು.
ಬೆಳಗ್ಗೆ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಶಂಖಚೂಡ ದೇವರು ಮತ್ತು ಪರಿವಾರ ಸಾನಿಧ್ಯಗಳಿಗೆ ನೂತನವಾಗಿ ನಿರ್ಮಿಸಿರುವ ಕಟ್ಟೆಗಳಲ್ಲಿ ಪುನರ್ ಪ್ರತಿಷ್ಠಾ ಕಲಶೋತ್ಸವ ನಡೆಯಿತು.
ಬ್ರಹ್ಮಶ್ರೀ ವೇದಮೂರ್ತಿ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳು ನೇತೃತ್ವದಲ್ಲಿ ಧಾರ್ಮಿಕ ವಿಧಿವಿದಾನಗಳೊಂದಿಗೆ ಕಾರ್ಯಕ್ರಮ ನಡೆಯಿತು.
ಜ. 18 ರ ಸಂಜೆ ತಂತ್ರಿಗಳ ಆಗಮನದ ಬಳಿಕ ಸಾಮೂಹಿಕ ಪ್ರಾರ್ಥನೆ, ಆಚಾರ್ಯ ವರಣ, ಪ್ರಾಸಾದ ಬಿಂಬ ಪರಿಗ್ರಹ, ಪಶುಧಾನ ಪುಣ್ಯಾಹ, ಪ್ರಾಸಾದ ಶುದ್ದಿ, ಜಲಾಧಿವಾಸ, ಸ್ಥಳ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಳಿಕ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು
ಜ. 19 ರ ಬೆಳಿಗ್ಗೆ ಶ್ರೀ ಗಣಪತಿ ಹೋಮ, ಜಲೋದ್ಧಾರ, ಬಿಂಬ ಶುದ್ದಿ, ಅನುಜ್ಞಾಕಲಶ, ಅನುಜ್ಞಾ ಪೂಜೆ, ಪ್ರಾರ್ಥನೆ, ಜೀವೋದ್ವಾಸನೆ, ಕಲಶ ಪೂಜೆ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ಪಾಯಸ ಹೋಮ, ಶಂಖಚೂಡ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಕ್ಷೀರಾಭಿಷೇಕ, ಬೊಂಡಾಭಿಷೇಕ, ಕಲಶಾಭಿಷೇಕ ಬಲಿ, ನೈವೇದ್ಯ ಸಮರ್ಪಣೆ ನಡೆದು ಮಹಾಪೂಜೆ, ನಿತ್ಯ ನೈಮಿತ್ಯಾಧಿಗಳ ನಿರ್ಣಯ ನಡೆದು ಪ್ರಸಾದ ವಿತರಣೆ ಬಳಿಕ ಬಳಿಕ ಅನ್ನಸಂತರ್ಪಣೆ ನಡೆಯಿತು.
ಅನುವಂಶಿಯ ಅಧ್ಯಕ್ಷ ಮಣಿಯಾನ ಪುರುಷೋತ್ತಮ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಣಿಯಾನ ಸುಬ್ಬಣ್ಣ ಗೌಡ, ಪ್ರಧಾನ ಕಾರ್ಯದರ್ಶಿ ಡಿ.ಆರ್ ಲೊಕೇಶ್ವರ , ಜತೆ ಕಾರ್ಯದರ್ಶಿ ಚಿನ್ನಪ್ಪ ಗೌಡ ಮುಚ್ಚಾರ, ಮಣಿಯಾನ ಶಿವಕುಮಾರ, ಮಣಿಯಾನ ತರವಾಡು ಮನೆಯ ಹರಿಶ್ಚಂದ್ರ ಮನೆಯವರು, ಕೋಶಾಧಿಕಾರಿ ಮಾಧವ ಮಾಸ್ತರ್ ಮೂಕಮಲೆ, ಕಿಶೋರ್ ಪೈಕ, ಜಗದೀಶ ಪೈಕ ಸತ್ಯನಾರಾಯಣ ದೋಲನಮನೆ, ಮತ್ತಿತರರು ನೇತೃತ್ವ ವಹಿಸಿದ್ದರು.
ಗೌರವ ಸಲಹೆಗಾರರಾದ ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಉಪಾಧ್ಯಕ್ಷ ಸತೀಶ್ ಮಣಿಯಾನ, ಸತ್ಯ ನಾರಾಯಣ ದೋಲನ ಮನೆ, ಕೇಶವ ಎಚ್ ಬಿ, ಪ್ರೀತಂ ಮುಂಡೋಡಿ, ಶ್ರೀ ಶಂಖಚೂಡ ಕ್ಷೇತ್ರ ಸೇವಾ ಟ್ರಸ್ಟ್ ಉಪಾಧ್ಯಕ್ಷ ಕಾಳಿಕಾ ಪ್ರಸಾದ್, ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಮ್ಮದೇರೆ, ಜತೆ ಕಾರ್ಯದರ್ಶಿ ಜಗದೀಶ ಪೈಕ, ಕೋಶಾಧಿಕಾರಿ ಲಿಂಗಪ್ಪ ಗೌಡ ಚಿತ್ತಡ್ಕ, ಸದಸ್ಯರಾದ ಮಣಿಯಾನ ತ್ಯಾಗರಾಜ, ಮಣಿಯಾನ ಹರಿಶ್ಚಂದ್ರ ಗೌಡ, ಬಿ.ಕೆ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಪರಮೇಶ್ವರ ಭಟ್ ವಳಲಂಬೆ, ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ, ಡಿ.ಎಂ ರಾಮಣ್ಣ ಗೌಡ ದೇರಾಜೆ, ಮೇಸ್ತ್ರಿ ಲಿಂಗಪ್ಪ ಗೌಡ ನೂಜಾಡಿ ತಂಡ ಮತ್ತಿತರರು ಸಹಕರಿಸಿದರು.
ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಕ್ತರು, ಸ್ಥಳೀಯ ಮಹಿಳೆಯರು, ಪುರುಷರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು. ವಿಶೇಷವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿ ಮನೆಯವರಿಗೆ ಪ್ರತ್ಯೇಕವಾಗಿ ಬ್ಯಾಗ್ ನಲ್ಲಿ ಪ್ರಸಾದ ವ್ಯವಸ್ಥೆ ಮಾಡಿರುವುದು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು