ಕುಕ್ಕುಜಡ್ಕದಲ್ಲಿ ಯು.ಕೆ ಅಗ್ರಿಕಲ್ಚರಲ್ ಟ್ರೇಡಿಂಗ್ ಪ್ರೈ ಲಿ ಶುಭಾರಂಭ

0

ಸುಳ್ಯ : ಕೃಷಿ ಉತ್ಪನ್ನಗಳಾದ ಅಡಿಕೆ , ತೆಂಗು , ರಬ್ಬರ್ , ಕರಿಮೆಣಸು ಸಹಿತ ಇನ್ನೂ ಹಲವು ಕೃಷಿ ಉತ್ಪನ್ನಗಳ ಜೊತೆಗೆ ಕಾಡು ಉತ್ಪನ್ನಗಳ ಖರೀದಿ ಕೇಂದ್ರ ಯು.ಕೆ ಯು.ಕೆ ಅಗ್ರಿಕಲ್ಚರಲ್ ಟ್ರೇಡಿಂಗ್ ಪ್ರೈ ಲಿ ಜ. 13ರಂದು ಕುಕ್ಕುಜಡ್ಕ ಕುಕ್ಕೆ ಶ್ರೀ ಕಮರ್ಷಿಲ್ ಸಂಕೀರ್ಣ ದಲ್ಲಿ ಶುಭಾರಂಭಗೊಂಡಿತು. ನಿವೃತ್ತ ಮುಖ್ಯೋಪಧ್ಯಾಯ ಡಿ. ಸುಲೋಚನ ಗೌಡ ನೂತನ ಮಳಿಗೆಯ ಉದ್ಘಾಟನೆ ನೆರವೇರಿಸಿ , ಶುಭ ಹಾರೈಸಿದರು.

ಈ ವೇಳೆ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಮೋಹನ ಪೊಯ್ಯೆಮಜಲು , ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರಾಧಕೃಷ್ಣ ಬೊಳ್ಳುರು , ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡ ಕೊಡ್ತ್ ಗುಳಿ ಮತ್ತು ಕುಕ್ಕೆ ಶ್ರೀ ಸಂಕೀರ್ಣದ ಮಾಲಕ ಮಾಯಿಲಪ್ಪ ಗೌಡ ಸಹಿತ ಹಲವರು ಅತಿಥಿಗಳು ಆಗಮಿಸಿ ಮಳಿಗೆಯ ಶ್ರೇಯೋಭಿವೃದ್ಧಿಗೆ ಹಾರೈಸಿದರು. ಯುಕೆ ಅಗ್ರಿಕಲ್ಚರಲ್ ಟ್ರೇಡಿಂಗ್ ಪಾಲುದಾರರಾದ ಉಮ್ಮರ್ ಯು.ಕೆ ಕೋಡಿಂಬಾಡಿ ,ಹುಸೈನಾರ್ ಸಂತೋಷ್ ಗ್ರೂಪ್ ಮಾಡಾವು , ಶಹಬಾಝ್ ಯು.ಕೆ ಮತ್ತು ಮಹಮ್ಮದ್ ಹಸೀರ್ ಅತಿಥಿಗಳನ್ನು , ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು