ಡಯಟ್ ಮಂಗಳೂರು ಹಾಗೂ ಸಿ ಟಿ ಇ ಮೈಸೂರು ಇವರ ಸಹಯೋಗದೊಂದಿಗೆ ನಡೆದ ಆಲೂರು ವೆಂಕಟರಾವ್ ಭಾಷಾ ಕೌಶಲ ಜಿಲ್ಲಾಮಟ್ಟದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಶಾಲಾ ತಂಡವು ಹಿಂದಿ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿಯನ್ನು ಪಡೆದರು.
ಇದರಲ್ಲಿ ವಿದ್ಯಾರ್ಥಿಗಳಾದ ಸಾನ್ವಿ , ಅನುಜ್ಞ, ಶ್ರವಣ್, ಭವಿತ್, ಗೌತಮ್ ಮತ್ತು ನಿತೇಶ್ ಭಾಗವಹಿಸಿರುತ್ತಾರೆ. ಇವರಿಗೆ ಶಾಲಾ ಶಿಕ್ಷಕಿಯರಾದ ಶ್ರೀಮತಿ ಭವಾನಿ ಮತ್ತು ಶ್ರೀಮತಿ ಶಕೀರ ಇವರು ತರಬೇತಿ ನೀಡಿರುತ್ತಾರೆ.