ಬಳ್ಪ ಗ್ರಾಮದ ಕುಮನಮಾಳ್ಯ ಶ್ರೀ ಶಿರಾಡಿ ರಾಜನ್ ಮತ್ತು ಶ್ರೀ ಉಳ್ಳಾಕುಲು ದೈವಸ್ಥಾನ ವಿಷ್ಣುಮಂಗಲ ಜೀರ್ಣೋದ್ಧಾರಗೊಂಡು ಮಾ. 15ರಿಂದ 18ರ ತನಕ ಬ್ರಹ್ಮ ಕಲಶ, ನೇಮೋತ್ಸವ ನಡೆಯಲಿದ್ದು, ಬ್ರಹ್ಮ ಕಲಶೋತ್ಸವ ಸಮಿತಿ ರಚನೆ ಜ. 19ರಂದು ನಡೆಯಿತು.
ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಲಿಂಗಪ್ಪ ಗೌಡ ನಿಡ್ಲೆ, ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಕುಳ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯಕುಮಾರ್ ಕಾಂಜಿ ಮತ್ತು ಕೋಶಾಧಿಕಾರಿಯಾಗಿ ನಾಗೇಶ್ ಪಡಿಕ್ಕಿಲಾಯ ಆಯ್ಕೆಯಾಗಿದ್ದಾರೆ. ಜತೆ ಕಾರ್ಯದರ್ಶಿಯಾಗಿ ಶಿವಕುಮಾರ್ ಎಣ್ಣೆಮಜಲು, ಉಪಾಧ್ಯಕ್ಷರುಗಳಾಗಿ ಗೋಪಾಲ ಎಣ್ಣೆಮಜಲು, ವಿನೋದ್ ಬೊಳ್ಮಲೆ ಮತ್ತು ಶೂರಪ್ಪ ಗೌಡ ಪಂಡಿ ಆಯ್ಕೆಯಾದರೆ ಗೌರವ ಸಲಹೆಗಾರರಾಗಿ ದೊಡ್ಡಣ್ಣ ಗೌಡ ಬಿಟ್ಟಂಗಿಲ, ತಮ್ಮಯ್ಯ ಗೌಡ ವಿಷ್ಣುಮಂಗಿಲ, ನಾಗಪ್ಪ ಗೌಡ ಕುಳ, ಪುಟ್ಟಣ್ಣ ಗೌಡ ಕಲ್ಲೇರಿ, ಸೀತಾರಾಮ ದೊಡ್ಡಮನೆ, ಸದಾಶಿವ ಎಣ್ಣೆಮಜಲು, ಪುಟ್ಟಣ್ಣ ದೊಡ್ಡಮನೆ ಆಯ್ಕೆಯಾಗಿದ್ದಾರೆ.