ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ನೇಮಕಾತಿಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯಲ್ಲಿ ನಮ್ಮಲ್ಲಿ ತರಬೇತಿ ಪಡೆದು ಪೊಲೀಸ್ ಇನ್ಸ್ಪೆಕ್ಟರ್ ಆಗಿ ಆಯ್ಕೆಗೊಂಡಿರುವ ಸಂಸ್ಥೆಯ ವಿದ್ಯಾರ್ಥಿ ಸದ್ಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ ಮುದವಿ ರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುಳ್ಯ ಠಾಣೆಯ ಸಬ್ ಇನ್ಸ್ಪೆಕ್ಟರ್ ಸರಸ್ವತಿ ರವರು ” ಪೊಲೀಸ್ ಇಲಾಖೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು, ಸರಕಾರಿ ಹುದ್ದೆಗಳಿಗೆ ಏರುವ ಮೂಲಕ ತಾವು ಸಮಾಜಮುಖಿಯಾಗಿ ಕೆಲಸ ಮಾಡಲು ಅತ್ಯುತ್ತಮ ಅವಕಾಶವಿರುತ್ತದೆ. ” ಎಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿದ ಬಸವರಾಜ ರವರು ” ನಾನು ಕಾನ್ಸ್ಟೇಬಲ್ ಕೆಲಸ ಬಿಟ್ಟು ದಾರವಾಡದಲ್ಲಿ ತರಬೇತಿಗೆ ಹೋಗಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದೆ. ಆದರೆ ಇಲ್ಲಿ ವಿದ್ಯಾಮಾತಾ ಅಕಾಡೆಮಿ ಬಗ್ಗೆ ತಿಳಿದುಕೊಂಡು ಇಲ್ಲಿ ಅತ್ಯುತ್ತಮ ತರಬೇತಿಯ ಸಹಾಯವನ್ನು ಪಡೆದುಕೊಂಡು ನಾನು ಸಬ್ ಇನ್ಸ್ಪೆಕ್ಟರ್ ಆದೆ ಕರ್ತವ್ಯದ ಒತ್ತಡದಲ್ಲಿ ತರಗತಿಗಳಿಗೆ ಬರಲು ಕಷ್ಟವಿದ್ದಾಗ ಆನ್ಲೈನ್ ಮುಖಾಂತರವೂ ತರಗತಿಗಳನ್ನು ನೀಡಿ ನನಗೆ ಪ್ರೋತ್ಸಾಹ ನೀಡಿದ ವಿದ್ಯಾಮಾತಾ ಅಕಾಡೆಮಿಯನ್ನು ನಾನು ಜೀವನದಲ್ಲಿ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ.” ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಬಸವರಾಜ ರವರು 22 – 01 – 2025 ರಂದು ಇಲಾಖಾ ತರಬೇತಿಗಾಗಿ ತೆರಳುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಉಪಸ್ಥಿತರಿದ್ದು “ನಮ್ಮ ಪ್ರತೀ ವಿದ್ಯಾರ್ಥಿಯು ಸಾಧನೆ ಮಾಡಿದಾಗ ಅದು ನಾವು ಸಾಧನೆ ಮಾಡಿದಷ್ಟೇ ಸಂತೋಷವಾಗುತ್ತದೆ, ಅತ್ಯುತ್ತಮ ಭ್ರಷ್ಟಾಚಾರ ರಹಿತ ಸಾರ್ವಜನಿಕ ಸೇವೆಯನ್ನು ಮಾಡಿ” ಎಂದು ಶುಭ ಹಾರೈಸಿ, ಅತಿಥಿಯ ನೆಲೆಯಲ್ಲಿ ಬಂದ ಸಬ್ ಇನ್ಸ್ಪೆಕ್ಟರ್ ಸರಸ್ವತಿ ರವರಿಗೆ ಸಂಸ್ಥೆಯ ಪರವಾಗಿ ಗೌರವಿಸಿದರು. ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಪಡೆದ 45 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ತರಬೇತುದಾರರಾದ ಚಂದ್ರಕಾಂತ್, ಉಷಾ ಯಶಸ್ವಿನಿ ಮತ್ತು ಸಿಬ್ಬಂದಿ ಮಿಥುನ್ ರೈ ರವರು ಉಪಸ್ಥಿತರಿದ್ದರು.