ಆಲೆಟ್ಟಿ ರಸ್ತೆಯ ಗುರುಂಪು ಬಳಿ ಶಾಲಾ ವಾಹನವೊಂದು ಇಂದು ಬೆಳಗ್ಗೆ ಮಕ್ಕಳನ್ನು ಕರೆ ತರುವ ಸಂದರ್ಭದಲ್ಲಿ ಜೆ.ಜೆ.ಎಂ ಕಾಮಗಾರಿ ಯಿಂದಾಗಿ ಚರಂಡಿಗೆ ವಾಲಿದ ಘಟನೆ ಸಂಭವಿಸಿದೆ
ಬೆಳಗ್ಗೆ ಬಂದಡ್ಕ ಕೋಲ್ಚಾರು ಕಡೆಯಿಂದ ಕೆ.ವಿ.ಜಿ ಶಾಲೆಗೆ ಬರುವ ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆದುಕೊಂಡು ಬರುತ್ತಿರುವಾಗ ಘಟನೆ ನಡೆಯಿತು. ಘಟನೆಯಲ್ಲಿ ಬಸ್ಸಿಗೆ ಹಾನಿಯಾಗಿದ್ದು ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.
ಜೆ.ಜೆ.ಎಂ ಪೈಪು ಲೈನ್ ಕಾಮಗಾರಿಯಿಂದ ಕಾಂಕ್ರೀಟ್ ರಸ್ತೆ ಅಗೆದ ಪರಿಣಾಮ ಇಂತಹ ಘಟನೆಗಳು ನಿತ್ಯವು ಸಂಭವಿಸುತ್ತಿದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ. ಅನಾಹುತ ಸಂಭವಿಸುವ ಮೊದಲು ಸಂಬಂಧ ಪಟ್ಟ ಗುತ್ತಿಗೆದಾರರು ಆದಷ್ಟು ಬೇಗ ರಸ್ತೆಯನ್ನು ಹಿಂದಿನಂತೆ ಸಮರ್ಪಕ ರೀತಿಯಲ್ಲಿ ಕಾಂಕ್ರೀಟಿಕರಣ ಮಾಡಿಕೊಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.