ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಜ.26ರಿಂದ ನಡೆಯಲಿದ್ದು, ಇದರ ಗೊನೆ ಮುಹೂರ್ತ ಕಾರ್ಯಕ್ರಮ ಜ.20ರಂದು ನಡೆಯಿತು.
ದೇವಸ್ಥಾನದ ಅರ್ಚಕರಾದ ನೀಲಕಂಠ ಭಟ್ ಪ್ರಾರ್ಥನೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಚಂದ್ರಕಾಂತ್ ಎಂ.ಆರ್., ನಾರಾಯಣ ಕೇಕಡ್ಕ, ನವೀನ್ ಕುದ್ಪಾಜೆ, ಚಂದ್ರಶೇಖರ ಅಡ್ಪಂಗಾಯ, ಡಿ.ಎನ್. ವೆಂಕಟ್ರಮಣ, ಎ.ಟಿ.ಕುಸುಮಾಧರ, ಕೃಷ್ಣ ಬೆಟ್ಟ, ವಿಠಲ ಸರ್ವೆಯರ್, ದೀಪಕ್ ಅಳಿಕೆಮಜಲು, ರಘುನಾಥ ರೈ, ಶೀಲಾವತಿ ಅಳಿಕೆಮಜಲು, ವಾಸುದೇವ ಬೆಳ್ಳಿಪಾಡಿ, ಪದ್ಮನಾಭ ಅಳಿಕೆಮಜಲು, ತೀರ್ಥರಾಮ ನಡುಮನೆ ಮೊದಲಾದವರಿದ್ದರು.