ಗಾಯಕ ಸುಳ್ಯದ ವಿಜಯ ಕುಮಾರ್ ರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ

0

ರಾಯಚೂರಿನ ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ರವರಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಕೊಡ ಮಾಡುವ ರಾಷ್ಟ್ರ ಮಟ್ಟದ “ನ್ಯಾಷನಲ್ ಅಚ್ಯೂಮೆಂಟ್ ಅವಾರ್ಡ್” ಗೆ ಗಾಯಕ ಸುಳ್ಯದ ವಿಜಯಕುಮಾರ್ ಭಾಜನರಾಗಿದ್ದು, ಜ.18ರಂದು ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಕನ್ನಡ ಕಲರವ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಹಾಗೆಯೇ ಹಲವು ಕಡೆ ಸಂಗೀತ ಕಾರ್ಯಕ್ರಮ ನೀಡಿರುವ ಇವರು, ಫೇಸ್ ಬುಕ್ ಲೈವ್, ಇತರ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿ, 7 ಸಂಗೀತ ಪ್ರಶಸ್ತಿ, ಹಾಸನ ಜಿಲ್ಲಾ ಪ್ರಶಸ್ತಿ, ಕಾಸರಗೋಡು ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ – 2024 ಸೇರಿದಂತೆ ಹಲವು ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ವಿಜಯಕುಮಾರ್ ರವರು ಸುಳ್ಯ ಟಿಎಪಿಸಿಎಂಎಸ್ ಇದರ ಉದ್ಯೋಗಿಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯ ರಾಗಿದ್ದಾರೆ.