ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ
ನಿಸರ್ಗ ಯುವಕ ಮಂಡಲ ಐನೆಕಿದು ಇದರ ಬೆಳ್ಳಿಹಬ್ಬ ಸಂಭ್ರಮ ಪ್ರಯುಕ್ತ ಜ.19 ರಂದು
ಸಭಾಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಅಂದು ಸಂಜೆ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕುಮಾರ ವೈಭವ ನಡೆಯಿತು ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ನಿಸರ್ಗ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಗಿರೀಶ್ ಆಚಾರ್ಯ ಪೈಲಾಜೆ ಅಧ್ಯಕ್ಷತೆ ವಹಿಸಿದ್ದರು.
ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು,ಕಡಬ ತಾಲ್ಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಸುಬ್ರಹ್ಮಣ್ಯ ಗ್ತಾ.ಪಂ ಮಾಜಿ ಅಧ್ಯಕ್ಷೆ ಶ್ರೀಮತಿ ಲಲಿತಾ ಗುಂಡಡ್ಕ ನಿಸರ್ಗ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ನಿಸರ್ಗ ಯುವಕ ಮಂಡಲದ ಅಧ್ಯಕ್ಷ ಕಾರ್ತಿಕ್ ಕೂಜುಗೋಡು, ಬೆಳ್ಳಿಹಬ್ಬ ಸಮಿತಿ ಸಂಚಾಲಕ ಯತೀಂದ್ರ ಬಿ.ಆರ್ ವೇದಿಕೆಯಲ್ಲಿದ್ದರು. ವೇದಿಕೆ ಸಮಿತಿ ಸಂಚಾಲಕ ನವೀನ್ ಕಟ್ರಮನೆ ಸ್ವಾಗತಿಸಿ, ಭುಕ್ಷಿತ್ ನಿರ್ಪಾಡಿ ವಂದಿಸಿದರು . ಶ್ರೀಮತಿ ವನಿತಾ ಉದಯಕುಮಾರ್ ಕೂಜುಗೋಡು ಹಾಗೂ ಲೋಹಿತ್ ನವಗ್ರಾಮ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಲಾಕುಂಭ ಕುಳಾಯಿ ತಂಡದಿಂದ ತುಳು ನಾಟಕ “ಪರಮಾತ್ಮೆ ಪಂಜುರ್ಲಿ” ನಡೆಯಲಿದೆ.