ಬೆಳ್ಳಾರೆ ಪ್ರಾ.ಆ.ಕೇಂದ್ರಕ್ಕೆ ಹೋಗುವ ರಸ್ತೆಗೆ ಇತ್ತೀಚೆಗೆ ಮಣ್ಣು ಹಾಕಿದ್ದು, ರಸ್ತೆ ಧೂಳುಮಯವಾಗಿದೆ.
ಈ ರಸ್ತೆ ಉಜ್ರೋಳಿಯಾಗಿ ಕೊಡಿಯಾಲಕ್ಕೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳಿದ್ದುದನ್ನು ಗಮನಿಸಿದ ಸ್ಥಳೀಯರು ಇತ್ತೀಚೆಗೆ ಮಣ್ಣು ಹಾಕಿದ್ದರು. ಈಗ ರಸ್ತೆಗೆ ನೀರು ಹಾಕದೇ ಇರುವುದರಿಂದ ವಾಹನ ಸಂಚರಿಸುವಾಗ, ಜೋರಾಗಿ ಗಾಳಿ ಬೀಸುವಾಗ ರಸ್ತೆಯ ಧೂಳೆಲ್ಲ ಆಸ್ಪತ್ರೆಯ ಒಳಕ್ಕೆ ಪ್ರವೇಶಿಸಿ ಆಸ್ಪತ್ರೆಯ ಸಿಬ್ಬಂದಿಗಳಿಗೂ, ಚಿಕಿತ್ಸೆಗೆ ಬರುವ ರೋಗಿಗಳಿಗೂ ತೊಂದರೆಯಾಗುತ್ತಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಸ್ಥಳೀಯಾಡಳಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.