21ನೇ ಆರೋಪಿಯನ್ನು ಬಂಧಿಸಿದ ಎನ್ ಐ ಎ ತಂಡ
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅತಿಕ್ ಅಹಮದ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ.
ಬೆಳ್ಳಾರೆಯಲ್ಲಿ 2022ರ ಜುಲೈನಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿತ್ತು. ಪೊಲೀಸರು ಈವರೆಗೂ 21 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅತೀಕ್, ಪ್ರಕರಣದ ಮುಖ್ಯ ಪಿತೂರಿಕಾರ ಮುಸ್ತಫಾ ಪೈಚಾರ್ ಅವರಿಗೆ ಆಶ್ರಯ ನೀಡಿ ಸಹಾಯ ಮಾಡಿದ್ದ ಎನ್ನಲಾಗಿದೆ.
ಮುಸ್ತಫಾ ಈ ಹತ್ಯೆಯನ್ನು ಯೋಜಿಸಿ ನಡೆಸಿದ್ದು ಆನಂತರ ಮುಸ್ತಫಾ ಪರಾರಿಯಾಗಿದ್ದರು. ಈ ವೇಳೆ ಅತೀಕ್ ಅವರ ಪರಾರಿಗೆ ಸಹಾಯ ಮಾಡಿದ್ದರು ಎನ್ನಲಾಗಿದೆ.
ಮುಸ್ತಫಾರವರನ್ನು ಚೆನ್ನೈಗೆ ಕರೆದೊಯ್ಯುವುದನ್ನು ಒಳಗೊಂಡಂತೆ ಮೇ 2024 ರಲ್ಲಿ ಮುಸ್ತಫಾ ಬಂಧನವಾಗುವವರೆಗೆ ಅವರು ಕಾನೂನು ಜಾರಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು ಎಂದು ಕೂಡ ಹೇಳಲಾಗುತ್ತಿದೆ.