ದೇವಚಳ್ಳ ಶಾಲಾ ಶತಮಾನೋತ್ಸವ

0

ದೇವಚಳ್ಳ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವದ ಪ್ರಯುಕ್ತ ಶಾಲೆ ನಡೆದು ಬಂದ ನೂರರ ದಾರಿಯನ್ನು ನೆನಪಿಸುವ ವಿಶೇಷ ಸಾಕ್ಷ್ಯ ಚಿತ್ರ ” ಶತ ಗಾಥೆ ” ನಿರ್ಮಾಣಗೊಂಡಿದ್ದು ಜನವರಿ 24 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ.

ಶತಮಾನ ಸಮಿತಿ ವತಿಯಿಂದ ಹೊರ ತರಲಾಗುವ ಈ ಸಾಕ್ಷ್ಯ ಚಿತ್ರವನ್ನು ಸುದ್ದಿ ಮೀಡಿಯಾ ಕ್ರಿಯೇಷನ್ಸ್ ನಿರ್ಮಿಸಿದೆ. ಸಾಹಿತ್ಯ ಮತ್ತು ನಿರ್ದೇಶನ ದುರ್ಗಾಕುಮಾರ್ ನಾಯರ್ ಕೆರೆ ಅವರದ್ದು. ಕೌಶಿಕ್ ರಾಮ್ ಬಳ್ಳಕ್ಕ ಸಂಕಲನ ನಿರ್ವಹಿಸಿದ್ದು ಸುಶ್ಮಿತ್ ಬೊಳ್ಳೂರು ಕ್ಯಾಮರಾ ನಿರ್ವಹಣೆ ಮಾಡಿದ್ದಾರೆ. ದಯಾನಂದ ಕೊರತ್ತೋಡಿ ಸಹಕಾರ ನೀಡಿದ್ದಾರೆ.

ಶತಮಾನ ಸಂಭ್ರಮ ಕಾರ್ಯಕ್ರಮದ ಬಳಿಕ ಅದರ ದೃಶ್ಯಗಳ ಸಹಿತ ಈ ಸಾಕ್ಷ್ಯಚಿತ್ರ ಸಂಪೂರ್ಣವಾಗಿ ಲೋಕಾರ್ಪಣೆಗೊಂಡು ಜಗದಗಲ ಪ್ರಸಾರವಾಗಲಿದೆ.