ಹಗ್ಗಜಗ್ಗಾಟ ಪಿ ಆರ್ ಎಸ್ ಪಾರ್ಲ ಎ ಪ್ರಥಮ, ಪಿ ಆರ್ ಎಸ್ ಪಾರ್ಲ ಬಿ ದ್ವಿತೀಯ
ನಿಸರ್ಗ ಯುವಕ ಮಂಡಲ ಐನೆಕಿದು ಇದರ ಬೆಳ್ಳಿಹಬ್ಬ ಸಂಭಮ ಪ್ರಯುಕ್ತ ಜ.18 ರಂದು ಹಗ್ಗಜಗ್ಗಾಟ ಪಂದ್ಯಾಟ ನಡೆಯಿತು.
ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಪಿ.ಆರ್. ಎಸ್ ಪಾರ್ಲ ಎ (ಕೇರಳ ) ಪ್ರಥಮ ಪಿ.ಆರ್.ಎಸ್, ಪಾರ್ಲ ಬಿ ದ್ವಿತೀಯ ಸ್ಥಾನ ಪಡೆಯಿತು.
ದುಗಲಾಯ ದುಗ್ಗಲಡ್ಕ ತೃತೀಯ, ನ್ಯೂ ಫ್ರೆಂಡ್ ಬೊಮ್ಮಾರು ಚತುರ್ಥ, ನ್ಯೂ ಫ್ರೆಂಡ್ ಬೊಮ್ಮಾರು ಪಂಚಮ, ತೊಕ್ಕೊಟು ಬ್ರದರ್ ಆರನೇ ಬಹುಮಾನ ಪಡೆಯಿತು.
ಶಾಸಕಿ ಭಾಗೀರಥಿ ಉಪಸ್ಥಿತಿಯಲ್ಲಿ ಬಹುಮಾನ ವಿತರಿಸಲಾಯಿತು. ಪಂದ್ಯಾಟವನ್ನು ಹರಿಹರೇಶ್ವರ ದೇವಾಲಯದ ವ್ಯವಸ್ಥಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಉದ್ಘಾಟಿಸಿದರು. ಜಯಪ್ರಕಾಶ್ ಕೂಜುಗೋಡು, ಗಿರೀಶ್ ಪೈಲಾಜೆ, ಕಾರ್ತಿಕ್ ಕೂಜುಗೋಡು, ರಮೇಶ್ ಕೋನಡ್ಕ, ಲಕ್ಷ್ಮೀಶ ಇಜಿನಡ್ಕ, ಯಶವಂತ ಕೊಪ್ಪಲಗದ್ದೆ, ಭರತ್ ಆಚಾರಿಗದ್ದೆ ಮತ್ತಿತರರು ಉಪಸ್ಥಿತರಿದ್ದರು.